‘ಆ ಪ್ರಾಧಿಕಾರದ ಹಣ ಇರುವುದೇ ಜನರ ಒಳತಿಗೆ ಬಳಸುವುದಕ್ಕೆ. ಎಲ್ಲದಕ್ಕೂ ಸುಮ್ಮನೆ ಆರೋಪ ಮಾಡುತ್ತಾ ಹೋದರೆ ಹೇಗೆ ಹೇಳಿ? ನಮ್ಮ ತಂದೆ (ಸಿದ್ದರಾಮಯ್ಯ) ಮೇಲೆ ಮಾಡುತ್ತಿರುವ ಎಲ್ಲಾ ಆರೋಪಗಳೂ ಸುಳ್ಳಿನಿಂದ ಕೂಡಿವೆ. ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ವಿರೋಧ ಪಕ್ಷಗಳ ಯಾರಿಗೂ ಯಾವ ವಿಚಾರಗಳೂ ಸಿಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರಷ್ಟೆ’ ಎಂದು ಹೇಳಿದರು.
‘ಇಡೀ ವಿಶ್ವದಲ್ಲೇ, ಜನರ ಖಾತೆಗಳಿಗೆ ಹಣ ಹಾಕುತ್ತಿರುವ ಏಕೈಕ ಸರ್ಕಾರ ನಮ್ಮದು. ಇಂತಹ ಗ್ಯಾರಂಟಿ ಯೋಜನೆಗಳನ್ನು ಸಹಿಸಿಕೊಳ್ಳಲಾಗದೆ ವಿನಾಕಾರಣ ಆರೋಪಗಳನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಕೇಳುತ್ತಲೇ ಇರುತ್ತಾರೆ. ಅವರೇಕೆ ರಾಜೀನಾಮೆ ಕೊಡಬೇಕು? ಆರೋಪಗಳಿಗೆಲ್ಲಾ ರಾಜೀನಾಮೆ ಕೊಡುತ್ತಾ ಹೋದರೆ ಅದರಲ್ಲಿ ಅರ್ಥ ಇದೆಯಾ?’ ಎಂದರು.