ಬಾಗಲಕೋಟೆ: ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಸಂದರ್ಶನ, ಸ್ಪರ್ಧಾತ್ಮಕ ಪರೀಕ್ಷೆ, ಸಿಇಟಿಗೆ ಹಾಜರಾಗಲು ಒಂಟಿಯಾಗಿ ಬರುವ ಮಹಿಳೆಯರಿಗೆ, ಇನ್ನು ಮುಂದೆ ಅಲ್ಲಿ ಮೂರು ದಿನಗಳ ಕಾಲ ಸುರಕ್ಷಿತ ವಾಸ್ತವ್ಯದ ಖಾತರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಲಿದೆ.

ಅದಕ್ಕಾಗಿ ಬೆಂಗಳೂರಿನ 13 ಕಡೆ ಟ್ರಾನ್ಸಿಟ್ ಹಾಸ್ಟೆಲ್ಗಳನ್ನು ಗುರುತಿಸಿ, ಅಲ್ಲಿ ವಾಸ್ತವ್ಯಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದೆ. ಆದಾಯದ ಮಿತಿ ಇಲ್ಲದೇ ಎಲ್ಲ ವರ್ಗದ ಮಹಿಳೆಯರು ಈ ಹಾಸ್ಟೆಲ್ಗಳಲ್ಲಿ ಉಳಿದುಕೊಳ್ಳಬಹುದಾಗಿದೆ. ಈ ಅವಧಿಯಲ್ಲಿ, ಊಟ–ಉಪಾಹಾರ ಉಚಿತವಾಗಿ ಒದಗಿಸಲಾಗುತ್ತಿದೆ.

‘ಬೆಂಗಳೂರಿಗೆ ಒಬ್ಬಂಟಿಯಾಗಿ ಹೋಗುವ ಮಹಿಳೆಯರಿಗೆ ಅಲ್ಲಿಸಂಬಂಧಿಕರು ಹಾಗೂ ಸ್ನೇಹಿತರು ಇಲ್ಲದಿದ್ದರೆ ಉಳಿದುಕೊಳ್ಳಲು ತೀವ್ರ ತೊಂದರೆ ಆಗುತ್ತದೆ. ವಸತಿಗೃಹಗಳಲ್ಲಿ (ಲಾಡ್ಜ್) ಉಳಿದುಕೊಳ್ಳಲು ಬಹುತೇಕರು ಹಿಂದೇಟು ಹಾಕುತ್ತಾರೆ. ಇಲ್ಲವೇ ಮುಜುಗರ ಪಡುತ್ತಾರೆ. ಅದನ್ನು ತಪ್ಪಿಸಲು ಟ್ರಾನ್ಸಿಟ್ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ’ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

‘ಅಗತ್ಯವಿದ್ದವರು ಇದರ ಉಪಯೋಗ ಪಡೆದುಕೊಳ್ಳಲಿ. ಆದರೆ, ಬೆಂಗಳೂರಿಗೆ ಬರುವ ಮುನ್ನ ಆಯಾ ಹಾಸ್ಟೆಲ್ಗಳ ದೂರವಾಣಿಗೆ ಕರೆ ಮಾಡಿ ಕೊಠಡಿ ಕಾಯ್ದಿರಿಸಬೇಕು. ಜೊತೆಗೆ ಪರೀಕ್ಷೆಯ ಹಾಲ್ಟಿಕೆಟ್, ಕೆಲಸಕ್ಕೆ ಸಂದರ್ಶನ ಕರೆ ಪತ್ರ, ನೇಮಕಾತಿ ಪತ್ರ ಹಾಗೂ ಆಧಾರ್ ಕಾರ್ಡ್ ತಪ್ಪದೇ ತರಬೇಕು’ ಎಂದು ಹೇಳಿದರು.

ಬೆಂಗಳೂರಲ್ಲಿ ವಾಸ್ತವ್ಯಕ್ಕೆ ಎಲ್ಲೆಲ್ಲಿ ಅವಕಾಶ?

ಕೆಎಸ್ಸಿಡಬ್ಲು ವರ್ಕಿಂಗ್ ವುಮನ್ಸ್ ಹಾಸ್ಟೆಲ್, ಜಯಮಹಲ್ (080-233304-846); ಶಾರದಾ ಕುಟೀರ ಹಾಸ್ಟೆಲ್, ಶಂಕರಪುರ (080-26674697); ಯಂಗ್ ವುಮನ್ ಕ್ರಿಶ್ಚಿಯನ್ ಅಸೋಸಿಯೇಶನ್ ಹಾಸ್ಟೆಲ್, ಮಿಷನ್ ರೋಡ್, (080-22238574); ಯೂನಿವರ್ಸಿಟಿ ವುಮನ್ ಅಸೋಸಿಯೇಶನ್ ಹಾಸ್ಟೆಲ್, ಸಂಪಂಗಿರಾಮನಗರ (080-22223314), ಮಹಾತ್ಮಾಗಾಂಧಿ ವಿದ್ಯಾಪೀಠ ಹಾಸ್ಟೆಲ್, ಶಾವಿಗೆ ಮಲ್ಲೇಶ್ವರ ಹಿಲ್ಸ್ (080-26662226); ಜಯನಗರ ಸ್ತ್ರೀ ಸಮಾಜ ಹಾಸ್ಟೆಲ್, ಜಯನಗರ (080-26674697); ಆಲ್ ಇಂಡಿಯಾ ವುಮನ್ ಕಾನ್ಫರೆನ್ಸ್ ಹಾಸ್ಟೆಲ್, ಜಯನಗರ (080-26349676); ಬಸವ ಸಮಿತಿ ಹಾಸ್ಟೆಲ್, ಮೈಸೂರು ರಸ್ತೆ (080-22723355); ವಿಶಾಲ್ ವಿದ್ಯಾ ಸಂಸ್ಥೆ ಹಾಸ್ಟೆಲ್, ಕನಕಪುರ ಮುಖ್ಯ ರಸ್ತೆ (9341289653); ಎಚ್ಡಿಎಸ್ ಹಾಸ್ಟೆಲ್, ಕೆಜಿಐಡಿ ಕಾಲೋನಿ; ನಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಹಾಸ್ಟೆಲ್, ನಾಗರಬಾವಿ ಕ್ಯಾಂಪಸ್ (080-23160531). ಯಂಗ್ ವುಮನ್ ಕ್ರಿಶ್ಚಿಯನ್ ಅಸೋಸಿಯೇಶನ್ ಹಾಸ್ಟೆಲ್, ಕೋರಮಂಗಲ (080-25634813). ರೀಜನಲ್ ಇನ್ಸಿಟ್ಯೂಟ್ ಆಫ್ ಇಂಗ್ಲಿಷ್ ಹಾಸ್ಟೆಲ್, ಜ್ಞಾನಭಾರತಿ ಕ್ಯಾಂಪಸ್(080–23213243).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.