ಬೆಂಗಳೂರು: ಭಾರತ- ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯದ ಟಿಕೆಟ್ಗಳನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ ಎಂದು ಶಾಸಕರು ವಿಧಾನಸಭೆಯಲ್ಲಿ ಗದ್ದಲ ಮಾಡಿದ ಬೆನ್ನಲ್ಲೇ ಅಕ್ರಮ ಟಿಕೆಟ್ ಮಾರಾಟಕ್ಕೆ ಕಡಿವಾಣ ಹಾಕಲು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಹೊಸ ನಿಯಮ ಜಾರಿಗೆ ತರಲು ನಿರ್ಧರಿಸಿದ್ದಾರೆ.

‘ಸಾರ್ವಜನಿಕ ಮನರಂಜನಾ ಸ್ಥಳಗಳ ಟಿಕೆಟ್ ಮಾರಾಟ ಹಾಗೂ ಪಾಸ್ ವಿತರಣೆ ನಿಯಂತ್ರಣ’ ಹೆಸರಿನ ಹೊಸ ನಿಯಮದ ಪ್ರಾಥಮಿಕ ಗೆಜೆಟ್ ಪ್ರಕಟವಾಗಿದೆ. ನಿಯಮದ ಬಗ್ಗೆ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಲು ಒಂದು ತಿಂಗಳು ಕಾಲಾವಾಕಾಶ ನೀಡಲಾಗಿದೆ. ಏ. 10 ರಿಂದ ಈ ನಿಯಮದ ಅಂತಿಮ ಆದೇಶ ಹೊರಬೀಳಲಿದೆ.

ಸಾರ್ವಜನಿಕ ಮನರಂಜನಾ ಸ್ಥಳಗಳೆಂದು ನಿಯಮದಲ್ಲಿ ನಮೂದಿಸಲಾಗಿದೆ. ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಅಂತರರಾಷ್ಟ್ರೀಯ ಪಂದ್ಯಾವಳಿಗಳ ಟಿಕೆಟ್ಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕುವುದು ನಿಯಮದ ಮುಖ್ಯ ಉದ್ದೇಶ ಎನ್ನಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ಸಾರ್ವಜನಿಕ ಮನರಂಜನಾ ಸ್ಥಳದ ಪರವಾನಗಿ ಪಡೆದಿರುವ ಎಲ್ಲ ಸಂಸ್ಥೆಗಳು ಇದರ ವ್ಯಾಪ್ತಿಗೆ ಬರುತ್ತವೆ. ಮನರಂಜನಾ ಕಾರ್ಯಕ್ರಮ (ಸ್ಟೇಜ್ ಶೋ, ಲೈವ್ ಶೋ) ಸಹ ನಿಮಯದ ವ್ಯಾಪ್ತಿಗೆ ಬರಲಿವೆ.

ನಿಯಮದ ಪ್ರಮುಖ ಅಂಶಗಳು: ನಿಯಮದಂತೆ ಸಾರ್ವಜನಿಕ ಮನರಂಜನಾ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮ ಅಥವಾ ಕ್ರೀಡೆಗಳ ಟಿಕೆಟ್ ಮಾರಾಟದ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ನೀಡಬೇಕು. ಸಾರ್ವಜನಿಕ ಮನರಂಜನಾ ಕಾರ್ಯಕ್ರಮದ ಪ್ರವೇಶಕ್ಕೆ ನೀಡುವ ಟಿಕೆಟ್ಗಳು ಮತ್ತು ಪಾಸ್ಗಳನ್ನು ಅಧಿಕೃತ ಪ್ರತಿನಿಧಿಗಳ ಮೂಲಕವೇ ಮಾರಾಟ ಮಾಡಬೇಕು.ಯಾವ ವ್ಯಕ್ತಿಯ ಮೂಲಕ ಟಿಕೆಟ್ ವಿತರಣೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಮೂರು ದಿನಗಳ ಮೊದಲೇ ನೀೀಡಬೇಕು.

ಒಬ್ಬ ವ್ಯಕ್ತಿಗೆ ಐದಕ್ಕಿಂತ ಹೆಚ್ಚು ಮತ್ತು ಸಂಘ- ಸಂಸ್ಥೆಗಳಿಗೆ ಐವತ್ತಕ್ಕಿಂತ ಹೆಚ್ಚು ಟಿಕೆಟ್ಗಳನ್ನು ನೀಡುವಂತಿಲ್ಲ. ಇದನ್ನು ಮೀರಿ ಹೆಚ್ಚು ಟಿಕೆಟ್ ನೀಡಿದರೆ ಆ ಬಗ್ಗೆ 24 ಗಂಟೆಗಳ ಒಳಗೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಈ ಆದೇಶವು ಕೌಂಟರ್ ಮತ್ತು ಇಂಟರ್ನೆಟ್ ಮೂಲಕ ಮಾರಾಟ ಮಾಡುವ ಟಿಕೆಟ್ಗಳಿಗೆ ಅನ್ವಯಿಸುತ್ತದೆ.

ಸಾರ್ವಜನಿಕರಿಗೆ ಮಾರುವ ಟಿಕೆಟ್ಗಳ ಸಂಖ್ಯೆ, ಅದನ್ನು ಮಾರುವ ವ್ಯಕ್ತಿ ಮತ್ತು ಮಾರಾಟದ ರೀತಿಯ ಬಗ್ಗೆ ಸಾರ್ವಜನಿಕರಿಗೆ ಎರಡು ದಿನಗಳ ಮೊದಲೇ ಮಾಧ್ಯಮಗಳ ಮೂಲಕ ಮಾಹಿತಿ ನೀಡಬೇಕು. ಇದು ಇಂಟರ್ನೆಟ್ ಮೂಲಕ ಮಾರಾಟ ಮಾಡುವುದಕ್ಕೂ ಅನ್ವಯಿಸುತ್ತದೆ. ಸಾರ್ವಜನಿಕರಿಗೆ ಮಾರುವ ಟಿಕೆಟ್ಗಳಲ್ಲಿ ಶೇ 50ರಷ್ಟು ಇಂಟರ್ನೆಟ್ ಮೂಲಕ ಮತ್ತು ಶೇ 50ರಷ್ಟನ್ನು ಕೌಂಟರ್ಗಳ ಮೂಲಕ (ಎಲ್ಲ ದರ್ಜೆಯ ಟಿಕೆಟ್ಗಳೂ ಸೇರಿದಂತೆ) ಮಾರಾಟ ಮಾಡಬೇಕು.

ಇದನ್ನು ಉಲ್ಲಂಘಿಸಿದರೆ ಸಾರ್ವಜನಿಕರ ಮನರಂಜನಾ ಕೇಂದ್ರದ ವ್ಯವಸ್ಥಾಪಕರು, ನಿರ್ದೇಶಕರು, ಪಾಲುದಾರರು ಮತ್ತು ಸಂಬಂಧಿಸಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಕಾಳ ಸಂತೆಯಲ್ಲಿ ಟಿಕೆಟ್ ಮಾರುವವರನ್ನೂ ಶಿಕ್ಷಿಸಲಾಗುತ್ತದೆ ಎಂದು ನಿಯಮದಲ್ಲಿ ತಿಳಿಸಲಾಗಿದೆ. ‘ಕಾಳ ಸಂತೆಯಲ್ಲಿ ಟಿಕೆಟ್ ಮಾರಾಟಕ್ಕೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ನಿಮಯ ಜಾರಿಗೆ ತರಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು’ ಎಂದು ಬಿದರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.