ಕೆಜಿಎಫ್: ಬೇತಮಂಗಲ ಪೊಲೀಸ್ ಠಾಣೆ ಎಸ್‌ಐ ಹೊನ್ನೇಗೌಡ ಅವರು ಅಪರಾಧ ಪ್ರಕರಣವೊಂದರ ಆರೋಪಿಗಳಿಗೆ ಠಾಣೆಯಲ್ಲಿ ಬೂಟುಗಾಲಿನಿಂದ ಒದ್ದು ದೌರ್ಜನ್ಯ ನಡೆಸಿದ್ದು, ಘಟನೆಗೆ ಸಂಬಂಧಿಸಿದ ದೃಶ್ಯಾವಳಿ ತುಣುಕುಗಳು ವೈರಲ್ ಆಗಿವೆ.

ಸಮವಸ್ತ್ರಧಾರಿಯಾಗಿರುವ ಹೊನ್ನೇಗೌಡ ಇಬ್ಬರು ಆರೋಪಿಗಳಿಗೆ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿರುವುದು ಒಂದು ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಮತ್ತೊಂದು ದೃಶ್ಯಾವಳಿಯಲ್ಲಿ ಅವರು ಸಮವಸ್ತ್ರ ಧರಿಸದೆ ಮೊಬೈಲ್‌ನಲ್ಲಿ ತೆಲುಗು ಚಿತ್ರದ ಹಾಡು ಹಾಕಿಕೊಂಡು ನರ್ತಿಸುತ್ತಾ ಆರೋಪಿಗೂ ಕುಣಿಯುವಂತೆ ಬೆದರಿಕೆ ಹಾಕಿರುವುದು ಸೆರೆಯಾಗಿದೆ.

‘ಒಕ್ಕಲಿಗರ ಮನೆ ಬಳಿ ಹೋಗುತ್ತೀರಾ? ನಿಮಗೆ ಒಕ್ಕಲಿಗರ ಮನೆ ಹುಡುಗಿ ಬೇಕಾ? ವಡ್ಡರ ಹಾವಳಿ ಜಾಸ್ತಿಯಾಗಿದೆ. ಒಕ್ಕಲಿಗರ ಮನೆ ಬಳಿ ಹೋದಾಗ ಹೇಗಿರಬೇಕು ಗೊತ್ತಾ?’ ಎಂದು ಆರೋಪಿಗಳಿಗೆ ಪ್ರಶ್ನಿಸುವ ಹೊನ್ನೇಗೌಡ ನಾಟಕೀಯವಾಗಿ ವಿಧೇಯತೆಯ ಹಾವಭಾವ ತೋರಿಸಿರುವುದು ದೃಶ್ಯಾವಳಿಯಲ್ಲಿದೆ. ಅಲ್ಲದೇ, ‘ಹೊಡಿ ಮಗ ಹೊಡಿ ಮಗ’ ಎಂದು ಹಾಡು ಹೇಳುತ್ತಾ ಆರೋಪಿಗಳನ್ನು ಜಾತಿ ನಿಂದನೆ ಮಾಡಿದ್ದಾರೆ.

ಠಾಣಾ ಸಿಬ್ಬಂದಿಯೇ ಮೊಬೈಲ್‌ನಲ್ಲಿ ಘಟನಾವಳಿ ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ. ದೃಶ್ಯಾವಳಿ ತುಣುಕುಗಳು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡುತ್ತಿದ್ದು, ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶ್‌ಕುಮಾರ್ ಘಟನೆ ಸಂಬಂಧ ತನಿಖೆ ನಡೆಸಿ ಶನಿವಾರ (17) ವರದಿ ನೀಡುವಂತೆ ಡಿವೈಎಸ್ಪಿಗೆ ಆದೇಶಿಸಿದ್ದಾರೆ. ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿತ್ತು ಎಂಬುದು ತಿಳಿದುಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.