ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತ ಮರಳು- ಪರಿಣಾಮಗಳೇನು?

Last Updated 3 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಎರಡು ರೀತಿಯ ಮರಳುಗಳನ್ನು (ನದಿಯ ಮರಳು ಹಾಗೂ ಎಂ–ಸ್ಯಾಂಡ್‌) ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತದೆ. ಆದರೆ ಕ್ವಾರಿಯ ದೂಳನ್ನು ಎಂ–ಸ್ಯಾಂಡ್‌ ಎಂದು ನಂಬಿಸುತ್ತಾರೆ. ಇದು ಕಟ್ಟಡ ನಿರ್ಮಾಣಕ್ಕೆ ಸೂಕ್ತ ಅಲ್ಲ.

* ಮರಳು ಅಥವಾ ಎಂ–ಸ್ಯಾಂಡ್‌ ಸಾವಯವ ಪದಾರ್ಥಗಳಂತಹ ಹಾನಿಕಾರಕ ಅಂಶಗಳಿಂದ ಮುಕ್ತವಾಗಿರ
ಬೇಕು. ಇಂತಹ ಕಲುಷಿತ ಮರಳು ಕಟ್ಟಡದ ಅಥವಾಕಾಂಕ್ರೀಟ್‌ನ ಸಾಮರ್ಥ್ಯದ ಮೇಲೆ ದುಷ್ಪರಿ
ಣಾಮ ಬೀರುತ್ತದೆ. ಬಾಳಿಕೆ ಅವಧಿ ಕಡಿಮೆ ಮಾಡುತ್ತದೆ

* ಮರಳಿನಲ್ಲಿ ಆವೆಮಣ್ಣಿನಂಶ ಇರಬಾರದು. ವಾತಾವರಣದ ತೇವಾಂಶವನ್ನು ಹೀರಿಕೊಳ್ಳುವ ಆವೆಮಣ್ಣು ಹಿಗ್ಗುವ ಹಾಗೂ ಕುಗ್ಗುವ ಪ್ರಕ್ರಿಯೆಗೆ ಒಳಗಾಗುತ್ತದೆ. ಈ ಪ್ರಕ್ರಿಯೆಯಿಂದ ಕಾಂಕ್ರೀಟ್‌ ರಚನೆಯಲ್ಲಿ ಸಣ್ಣಪ್ರಮಾಣದ ಬಿರುಕುಗಳು ಉಂಟಾಗುವ ಅಪಾಯವಿದೆ. ಕಾಂಕ್ರೀಟ್‌ನ ಬಾಳಿಕೆ ಮೇಲೆ ಇದು ಕೂಡಾ ಪರಿಣಾಮ ಬೀರುತ್ತದೆ

* ಮರಳಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಆವೆಮಣ್ಣಿನ ಅಂಶ ಇದ್ದರೆ ಗಾರೆ ಕೆಲಸಕ್ಕೆ ಸಹಕಾರಿಯಾಗುತ್ತದೆ

* ಕಲುಷಿತ ಮರಳಿನಲ್ಲಿ ಹರಳಿನ ಹಂಚಿಕೆ ಒಂದೇ ಪ್ರಮಾಣದಲ್ಲಿ ಇರುವುದಿಲ್ಲ. ಅವುಗಳಲ್ಲಿ ದೂಳಿನ ಕಣಗಳು, ನೀರಿನಂಶ ಹೆಚ್ಚು ಇರುತ್ತದೆ. ಇದು ಸಿಮೆಂಟ್‌ ಗಟ್ಟಿಗೊಳ್ಳುವ ಪ್ರಕ್ರಿಯೆಗೆ ಹಾನಿ ಉಂಟುಮಾಡುತ್ತವೆ

* ಕಲುಷಿತ ಮರಳಿನಲ್ಲಿ ರಾಸಾಯನಿಕ ಅಂಶಗಳು ಸೇರಿದ್ದರೆ ಅದು ಬಲವರ್ಧನೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT