ದೇವನಹಳ್ಳಿ:ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪರೀಕ್ಷೆಗೆ ಹಾಜರಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಡೆಸ್ಕ್ ಮತ್ತು ಕೊಠಡಿಗಳ ಕೊರತೆಯಿಂದಾಗಿ ಕಾಲೇಜಿನ ಕಾರಿಡಾರ್ ಮತ್ತು ಪ್ರವೇಶ ದ್ವಾರದಲ್ಲೇ ಪರೀಕ್ಷೆ ಬರೆಯುವಂತಾಗಿದೆ.

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬಿ.ಎ, ಬಿ.ಎಸ್ಸಿ ಹಾಗೂ ಬಿ.ಬಿ.ಎಂ ಸೇರಿದಂತೆ ಇತರೆ ಪದವಿಯ ಪರೀಕ್ಷೆಯ ಒಟ್ಟು 1250 ವಿದ್ಯಾರ್ಥಿಗಳಿಗೆ 32 ಕೊಠಡಿಗಳ ಅಗತ್ಯವಿದೆ. ಆದರೆ ಕಾಲೇಜಿನಲ್ಲಿ ಕೇವಲ 12 ಕೊಠಡಿಗಳು ಇರುವುದರಿಂದ ವಿದ್ಯಾರ್ಥಿಗಳು ಕಟ್ಟಡದ ಕಾರಿಡರ್ನಲ್ಲಿಯೇ ಕುಳಿತು ಪರೀಕ್ಷೆ ಬರೆಯುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕ ಎ.ರಮೇಶ್, `ಕಾಲೇಜಿಲ್ಲಿ ಕೊಠಡಿಗಳ ಸಮಸ್ಯೆ ಇದೆ. 40 ವಿದ್ಯಾರ್ಥಿಗಳಂತೆ ಒಂದು ಕೊಠಡಿಯಂತೆ ಒಟ್ಟು 5 ಕೊಠಡಿಗಳಲ್ಲಿ ಪರೀಕ್ಷೆಯ ವ್ಯವಸ್ಥೆ ಮಾಡಲಾಗಿದೆ. ಸಣ್ಣ ಕೊಠಡಿಗಳಿಗೆ ಅನುಗುಣವಾಗಿ 15 ಹಾಗೂ 20 ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತಿದೆ.

ನಮಗೆ ಇನ್ನೂ 10 ರಿಂದ 12 ಕೊಠಡಿಗಳ ಅವಶ್ಯಕತೆ ಇದೆ. ವಿಶ್ವವಿದ್ಯಾಲಯದ ನಿಯಮದ ಪ್ರಕಾರ 40 ಪರೀಕ್ಷಾರ್ಥಿಗಳಿಗೆ ಒಂದು ಕೊಠಡಿ ವ್ಯವಸ್ಥೆ ಇರಬೇಕು ಎಂದರು.`ಈ ವ್ಯವಸ್ಥೆ ವಿಶ್ವವಿದ್ಯಾಲಯದ ನಿಯಮಕ್ಕೆ ವಿರುದ್ಧ ಆದರೂ 150 ವಿದ್ಯಾರ್ಥಿಗಳು ಕಾರಿಡಾರ್ನಲ್ಲಿ ಪರೀಕ್ಷೆ ಬರೆಯುವುದು ಅನಿವಾರ್ಯವಾಗಿದೆ. ಡೆಸ್ಕ್ಗಳ ವ್ಯವಸ್ಥೆಯು ಇಲ್ಲವಾಗಿದೆ. ಬೇರೆಡೆಯಿಂದ 50 ಪ್ಲಾಸ್ಟಿಕ್ ಕುರ್ಚಿಗಳನ್ನು ಇಲ್ಲಿಗೆ ತಂದುಹಾಕಲಾಗಿದೆ~ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.