ಮೈಸೂರು/ಗುಂಡ್ಲುಪೇಟೆ/ಗೋಣಿಕೊಪ್ಪಲು: ನಾಗರಹೊಳೆ ಮತ್ತು ಬಂಡೀ ಪುರ ರಾಷ್ಟ್ರೀಯ ಉದ್ಯಾನದಲ್ಲಿ ಭುಗಿ ಲೆದ್ದಿದ್ದ ಕಾಳ್ಗಿಚ್ಚು ಹತೋಟಿಗೆ ಬಂದಿದೆ. ಆದರೂ, ನಾಗರಹೊಳೆಯ ಮಾವ್ ಕಲ್ ಅರಣ್ಯಕ್ಕೆ ಭಾನುವಾರ ಸಂಜೆ ಬೆಂಕಿ ಬಿದ್ದು, ಐದು ಎಕರೆ ಅರಣ್ಯ ಭಸ್ಮವಾಗಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬೆಂಕಿ ಇಟ್ಟ ಆರೋಪದ ಮೇಲೆ ಐವರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾರೇಮಾಳ ಗ್ರಾಮದ ಡಿ. ಮಾರ, ಕಿರಿಕಾಳ, ಬೊತ್ತ ಮತ್ತು ಇಬ್ಬರು ಮಹಿಳೆಯರ ವಿರುದ್ಧ ದೂರು ದಾಖಲಾಗಿದೆ. ಅಕ್ರಮ ಪ್ರವೇಶ, ಸರ್ಕಾರಿ ಆಸ್ತಿಪಾಸ್ತಿ ಹಾನಿ ಆರೋಪದ ಅಡಿ ಬಂಡೀಪುರ ವಲಯ ಅರಣ್ಯಾ ಧಿಕಾರಿ ಎಸ್. ಜಯಶೇಖರ್ ಪ್ರಕರಣ ದಾಖಲಿಸಿದ್ದಾರೆ.
ಸಫಾರಿ ಇಂದಿನಿಂದ:ನ ಕಾಳ್ಗಿಚ್ಚು ಭುಗಿಲೆದ್ದ ಹಿನ್ನೆಲೆಯಲ್ಲಿ ನಾಲ್ಕು ದಿನ ಗಳಿಂದ ಸ್ಥಗಿತಗೊಂಡಿದ್ದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಫಾರಿ ಮಾರ್ಚ್ 17ರಿಂದ ಪುನರ್ ಆರಂಭವಾಗಲಿದೆ.

‘ಬಂಡೀಪುರದ ಅರಣ್ಯ ಇಲಾಖೆಯ ಕ್ಯಾಂಪಸ್ ಸುತ್ತ ಹೆಚ್ಚು ಹಾನಿಯಾಗಿದೆ. ಉದ್ಯಾನದ ಪ್ರವಾಸೋದ್ಯಮ ವಲ ಯದ 3 ಚದರು ಕಿ.ಮೀ. ಅರಣ್ಯ ಮಾತ್ರ ಬೆಂಕಿಗೆ ತುತ್ತಾಗಿದೆ. ಹೀಗಾಗಿ, ಸಫಾರಿಗೆ ಯಾವುದೇ ಅಡ್ಡಿ ಇಲ್ಲ. ಸೋಮವಾರದಿಂದ ಎಂದಿನಂತೆ ಸಫಾರಿ ಶುರುವಾಗಲಿದೆ’ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಎಚ್.ಸಿ. ಕಾಂತರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮಾವ್ಕಲ್ಗೆ ಮತ್ತೆ ಬೆಂಕಿ: ತಿತಿಮತಿ ಸಮೀಪದ ಕಲ್ಲಳ್ಳ ಮಾವ್ಕಲ್ ಅರ ಣ್ಯಕ್ಕೆ ಭಾನುವಾರ ಸಂಜೆ ಬೆಂಕಿ ಬಿದ್ದಿದ್ದು, ಒಣಗಿದ ಬಿದಿರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ರಸ್ತೆಯ ಅಂಚಿನ ಅರಣ್ಯದಲ್ಲಿ ಬೆಂಕಿ ಕಾಣಿಸಿ ಕೊಂಡಿದ್ದರಿಂದ ಅರಣ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸುವಲ್ಲಿ ಸಫಲರಾದರು.

ಮೂರು ದಿನಗಳ ಹಿಂದೆ ಮಾವ್ ಕಲ್ ಅರಣ್ಯಕ್ಕೆ ಬಿದ್ದ ಬೆಂಕಿ ಸಂಪೂರ್ಣ ನಂದಿಲ್ಲ. ಬೆಂಕಿಯಲ್ಲಿ ಹೊತ್ತಿ ಉರಿದ ಮರಗಳಲ್ಲಿ ಅಗ್ನಿಯ ಜ್ವಾಲೆ ಇನ್ನೂ ಹಾಗೇ ಇದೆ. ಭಾನುವಾರ ಗಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಬೆಂಕಿ ಮತ್ತಷ್ಟು ಅರಣ್ಯಕ್ಕೆ ಹಬ್ಬಿದೆ ಎನ್ನ ಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.