ಹರಪನಹಳ್ಳಿ: `ಬದುಕಿರೋ ತನಕ ಕುಡಿದೇನಂದ್ರೆ ನೀರಿಲ್ಲ; ಸತ್ತಾಗ ಹೂಳ್ಬೇಕು ಅಂದ್ರೆ ಸ್ಮಶಾನವೂ ಇಲ್ಲ. ದುಡಿದು ತಿನ್ನಬೇಕು ಅಂದ್ರ ಕೆಲ್ಸ ಇಲ್ಲ- ಗುಳೇ ಹೋಗದು ಮಾತ್ರ ಹಣೆ ಬರ್ದಾಗ ತಪ್ಪಿಲ್ಲ. ರೋಗ-ರುಜಿನಗಳು ಮೈಸೇರಿಕೊಂಡ್ವು ಅಂದ್ರಾ ತೋರ್ಸಕಾ ಡಾಕ್ಟ್ರು ಇಲ್ಲ. ವಾಸ ಮಾಡೋ ಮನೆ ಕೂಡಾ ಬೇರೊಬ್ಬರ ಜಮೀನಿನಲ್ಲಿ ಕಟ್ಟಿಕೊಂಡೀವಿ... ಸಾಹೇಬ್ರ ನಾವೇನು ಪಾಪ ಮಾಡಿವಿ...? ಇಂತಹ ನರಕದ ಬಾಳು ಯಾವ ಪಾಪಿಗೂ ಬರಬಾರದ್ರಿ ಸಾಹೇಬ್ರ...~

-ಭಾನುವಾರ ತಾಲ್ಲೂಕಿನ ಹಾರಕನಾಳು ಸಣ್ಣತಾಂಡಾ ಗ್ರಾಮದಲ್ಲಿನ ಬರ ಪರಿಸ್ಥಿತಿಯ ಅವಲೋಕನಕ್ಕಾಗಿ ಆಗಮಿಸಿದ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಅಶೋಕಕುಮಾರ್ ಸಿ. ಮನೋಳಿ ಅವರ ಮುಂದೆ, ಗ್ರಾಮಸ್ಥರು ನಿತ್ಯವೂ ಅನುಭವಿಸುತ್ತಿರುವ ನರಕ ಸದೃಶ್ಯದ ನೈಜಚಿತ್ರಣಗಳನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದು ಹೀಗೆ.

`ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಿದ್ದರೆ, ಗುಳೇ ನಿಯಂತ್ರಿಸಬಹುದಿತ್ತು~ ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಟಿ. ಪಾಂಡ್ಯಪ್ಪ ಅವರನ್ನು ಮನೋಳಿ ತೀವ್ರ ತರಾಟೆಗೆ ತೆಗೆದುಕೊಂಡರು. `ಜಾಬ್ಕಾರ್ಡ್ ಹೊಂದಿರುವ ಕಾರ್ಮಿಕರು ಕೆಲಸ ಕೇಳಿಲ್ಲ~ ಎಂದು ಸಂಬಂಧಿಸಿದ ಅಧಿಕಾರಿಗಳು ಹೇಳುತ್ತಿದ್ದಂತೆ ಕೆರಳಿದ ಮನೋಳಿ, ಕೆಲಸ ಕೇಳಲಿ, ಕೇಳದಿರಲಿ. ನಾಳೆ ಬೆಳಿಗ್ಗೆ 10ಗಂಟೆಯಿಂದಲೇ ಖಾತ್ರಿ ಕಾಮಗಾರಿ ಆರಂಭಿಸುವಂತೆ ಇಒ ಅವರಿಗೆ ತಾಕೀತು ಮಾಡಿದರು.

ಕುಡಿಯುವ ನೀರಿಗಾಗಿ ಈಗಾಗಲೇ 4 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಈ ಪೈಕಿ, 2 ಕೊಳವೆಬಾವಿಗಳಲ್ಲಿ ಮಾತ್ರ ಅಲ್ಪಪ್ರಮಾಣದ ನೀರು ಕಾಣಿಸಿಕೊಂಡಿದೆ. ಅದನ್ನೇ ಕುಡಿಯಲು ಪೂರೈಸಲಾಗುತ್ತಿದೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಎಇಇ ವೈ. ಶಶಿಧರ ಹೇಳಿದರು. ಇದಕ್ಕೆ ಗ್ರಾಮಸ್ಥರು ತೀವ್ರ ಅಕ್ಷೇಪ ವ್ಯಕ್ತಪಡಿಸಿ, `ನೀವು ಕೊಡೋ ನೀರು ಕೇವಲ ಎರಡು ನಳಗಳಲ್ಲಿ ಕಣ್ಣೀರಿನಂತೆ ಹನಿಯುತ್ತದೆ. ಹಗಲೆಲ್ಲಾ ಹಿಡಿದ್ರೂ ನಾಲ್ಕಾರು ಕೊಡ ತುಂಬಲ್ಲಾ. ಇಡೀ ಊರಿನ ಜನ ನೀರಿಗಾಗಿ ಪರದಾಡುತ್ತಿದ್ದಾರೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಇನ್ನೊಂದು ಕೊಳವೆಬಾವಿ ಕೊರೆಸುವಂತೆ ಮನೋಳಿ ಎಇಇಗೆ ಸೂಚಿಸಿದರು. ರಾಜೀವ್ ಗಾಂಧಿ ಸಬ್ಮಿಷನ್ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಂಡಿರುವ ರೂ 24ಕೋಟಿ ವೆಚ್ಚದ 29 ಹಳ್ಳಿಗಳ ಉದ್ದೇಶಿತ ನೀರು ಪೂರೈಕೆಯ ಯೋಜನಾ ವ್ಯಾಪ್ತಿಯಲ್ಲಿ ಗ್ರಾಮ ಸೇರ್ಪಡೆಯಾಗಿದೆ. ಪ್ರಕ್ರಿಯ ಟೆಂಡರ್ ಹಂತದಲ್ಲಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಶಾಶ್ವತ ನೀರು ಪೂರೈಸಲಾಗುವುದು ಎಂದು ಮನೋಳಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಸ್ಮಶಾನ ಭೂಮಿ: ಸ್ಮಶಾನ ಭೂಮಿ ಕುರಿತಂತೆ ಗ್ರಾಮಸ್ಥರ ಆತಂಕಕ್ಕೆ ಸ್ಪಂದಿಸಿದ ಮನೋಳಿ, ಅಧಿಕಾರಿಗಳ ನಿರ್ಲಕ್ಷ್ಯತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಗ್ರಾಮಕ್ಕೆ ಹೊಂದಿಕೊಂಡಿರುವ ಗೋಮಾಳ ಇಲ್ಲವೇ ಪರ್ಯಾಯ ಭೂಮಿಯನ್ನು ಕಾಯ್ದಿರಿಸಬೇಕು.

ಈ ಕೂಡಲೇ ಭೂಮಿ ಗುರುತಿಸಿ, ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವ ಸಲ್ಲಿಸುವಂತೆ ಹಾಗೂ ಈ ಬಗ್ಗೆ ಯಾವ ಹಳ್ಳಿಯಲ್ಲಿಯೂ ಅಪಸ್ವರ ಕೇಳಿಬರದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ಗೆ ಸೂಚಿಸಿದರು.

ಇಡೀ ಊರಿನ ಮನೆಗಳನ್ನು ಬೇರೊಬ್ಬರ ಜಮೀನಿನಲ್ಲಿ ಕಟ್ಟಿಕೊಂಡು ಜೀವಿಸುತ್ತಿದ್ದೇವೆ. ಮನೆ ಬಿದ್ದರೆ, ಇಲ್ಲವೇ ನವೀಕರಣ ಮತ್ತು ಹೊಸದಾಗಿ ಮನೆ ನಿರ್ಮಾಣಕ್ಕೆ ಕೈಹಾಕಿದರೆ, ಜಮೀನಿನ ಮಾಲೀಕರು ಅಡ್ಡಿಪಡಿಸುತ್ತಾರೆ. ಹೀಗಾದಾಗ ನಮಗೆ ಗುಡಿಯೇ ಗತಿ. ಕೂಡಲೇ ವಾಸಿಸುವ ಮನೆಗಳ ಜಮೀನು ಸ್ವಾಧೀನಪಡಿಸಿಕೊಂಡು, ಮನೆಯ ಮಾಲೀಕತ್ವದ ಹಕ್ಕುಪತ್ರ ನೀಡುವಂತೆ ಗ್ರಾಮಸ್ಥರು ಕೋರಿದರು. ಇದಕ್ಕೆ ಕಿಡಿಕಿಡಿಯಾದ ಮನೋಳಿ, ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ, ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಪ್ರಭಾರಿ ಉಪ ವಿಭಾಗಾಧಿಕಾರಿ ಇ. ಗೋಪಾಲಯ್ಯ, ತಹಶೀಲ್ದಾರ್ ಡಾ.ಸಿ. ವೆಂಕಟೇಶಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.