ಕುಣಿಗಲ್: ಪಟ್ಟಣದ ದಿವ್ಯಾ ಕನ್ವೆನ್ಷನ್ ಹಾಲ್ ಸಮೀಪ ಕಟ್ಟಿದ್ದ ಕರುಗಳ ಮೇಲೆ ಭಾನುವಾರ ಬೆಳಗಿನ ಜಾವ ಚಿರತೆ ದಾಳಿ ನಡೆಸಿದ್ದು, ನಾಗರಿಕರಲ್ಲಿ ಭೀತಿ ಮೂಡಿಸಿದೆ. ವಾನಂಬಾಡಿ ಕಾಲೊನಿಯ ಗೋಂವಿದರಾಜು ಮನೆ ಮುಂದೆ ಹಸು ಹಾಗೂ ಕರುಗಳನ್ನು ಕಟ್ಟಲಾಗಿತ್ತು. ಮುಂಜಾನೆ ದಾಳಿ ನಡೆಸಿರುವ ಚಿರತೆ ಎರಡು ಕರುಗಳನ್ನು ಸಮೀಪದ ಗದ್ದೆ ಬಯಲಿಗೆ ಎಳೆದೊಯ್ದು ತಿಂದು ಪರಾರಿಯಾಗಿದೆ.

ಇದುವರೆಗೂ ಪಟ್ಟಣದ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದು, ಇದೀಗ ಪಟ್ಟಣದ ಹೊರ ವಲಯದಲ್ಲಿ ಕಾಣಿಸಿಕೊಂಡಿರುವುದು ನಾಗರಿಕರ ಆತಂಕ ಹೆಚ್ಚಿಸಿದೆ.

ಕಳೆದ ವಾರವಷ್ಟೇ ಪಟ್ಟಣ ಸಮೀಪದ ಗಂಗೇನಹಳ್ಳಿಯಲ್ಲಿ ಕುದುರೆಯನ್ನು ಚಿರತೆ ಬಲಿ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.