ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಹಿಂದಿನ ಕಾರ್ಯನಿರ್ವಾಹಕ ನಿರ್ದೇಶಕ, ಐಎಎಸ್ ಅಧಿಕಾರಿ ಚಕ್ರವರ್ತಿ ಮೋಹನ್ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ಕಳೆದ ವರ್ಷ ವೃತ್ತಿಪರ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಯಲ್ಲಿ ನಿಯಮಬಾಹಿರವಾಗಿ ಪ್ರವರ್ಗ ಬದಲಾವಣೆಗೆ ಅವಕಾಶ ಕಲ್ಪಿಸಿದ ಆರೋಪ ಅವರ ಮೇಲಿದೆ.

ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಕೆಇಎ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಪ್ರವರ್ಗಗಳನ್ನು ನಮೂದಿಸಬೇಕು. ಇದರ ಮೂಲ ದಾಖಲೆಗಳನ್ನು ಕೌನ್ಸೆಲಿಂಗ್ ಆರಂಭಕ್ಕೂ ಮುಂಚೆ ಪರಿಶೀಲಿಸಲಾಗುತ್ತದೆ.

ಒಮ್ಮೆ ಪರಿಶೀಲನೆ ನಡೆಸಿದ ನಂತರ ಪ್ರವರ್ಗ ಬದಲಿಸಲು ಅವಕಾಶ ಇಲ್ಲ. ಆದರೂ, ಎರಡನೇ ಬಾರಿಗೆ ಪರಿಶೀಲನೆ ನಡೆಸಿ ಪ್ರವರ್ಗ ಬದಲಾವಣೆಗೆ ಅವಕಾಶ ಕಲ್ಪಿಸಿ ಚಕ್ರವರ್ತಿ ಮೋಹನ್ ಅಧಿಸೂಚನೆ ಹೊರಡಿಸಿದ್ದರು. ಈ ಆದೇಶದ ಬೆಂಬಲದಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವರ್ಗ ಬದಲಿಸಿ ಸೀಟು ಹಂಚಿಕೆ ಮಾಡಲಾಗಿದೆ.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರ ನಿಯಮಬಾಹಿರ ಆದೇಶದ ಅಡಿಯಲ್ಲಿ ನಡೆದಿರುವ ಪ್ರವರ್ಗ ಬದಲಾವಣೆ ಕುರಿತು ಪರಿಶೀಲನೆ ಆರಂಭವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನಿಯಮದಲ್ಲೇನಿದೆ: ವೃತ್ತಿಪರ ಶಿಕ್ಷಣ ಕೋರ್ಸ್ಗಳ ಪ್ರವೇಶ, ಸೀಟು ಹಂಚಿಕೆಗಾಗಿ ರಾಜ್ಯ ಸರ್ಕಾರ, ‘ವೃತ್ತಿಪರ ಶಿಕ್ಷಣ ಕೋರ್ಸ್ಗಳ ಸರ್ಕಾರಿ ಕೋಟಾ ಸೀಟುಗಳ ಪ್ರವೇಶಕ್ಕೆ ಅಭ್ಯರ್ಥಿಗಳ ಆಯ್ಕೆ–2006’ (ಸಿಇಟಿ ನಿಯಮ) ನಿಯಮಗಳನ್ನು ಜಾರಿಗೊಳಿಸಿತ್ತು. ವೈದ್ಯಕೀಯ, ದಂತವೈದ್ಯ, ಆಯುಷ್ ಮತ್ತು ಎಂಜಿನಿಯರಿಂಗ್ ಕೋರ್ಸ್ಗಳ ಸರ್ಕಾರಿ ಕೋಟಾ ಸೀಟು ಹಂಚಿಕೆ ಈ ನಿಯಮಗಳ ಪ್ರಕಾರವೇ ನಡೆಯುತ್ತದೆ.

ಇದರ ಕಲಂ 7ರ ಪ್ರಕಾರ, ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗಲೇ ಮೀಸಲಾತಿ ಬಯಸುವ ಪ್ರವರ್ಗಗಳನ್ನು ಉಲ್ಲೇಖಿಸಬೇಕು. ಅರ್ಜಿಯಲ್ಲಿ ಉಲ್ಲೇಖಿಸಿರುವ ಪ್ರವರ್ಗಗಳನ್ನು ದೃಢೀಕರಿಸುವಂತಹ ಮೂಲ ದಾಖಲೆಗಳನ್ನು ಪರಿಶೀಲನೆ ವೇಳೆ ಹಾಜರುಪಡಿಸಬೇಕು. ಪ್ರವರ್ಗಗಳನ್ನು ನಂತರದಲ್ಲಿ ಬದಲಾವಣೆ ಮಾಡಲು ಅವಕಾಶ ಇರುವುದಿಲ್ಲ. ಸುಳ್ಳು ಮಾಹಿತಿ ನೀಡಿ ಮೀಸಲು ಕೋಟಾದಡಿ ಸೀಟು ಪಡೆಯುವವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಕ್ರಮಗಳನ್ನು ಜರುಗಿಸಲು ಸೆಕ್ಷನ್ 13ರಲ್ಲಿ ಅಧಿಕಾರ ನೀಡಲಾಗಿದೆ.

ನಿಯಮ ಮೀರಿ ಆದೇಶ: 2013–14ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಸೀಟು ಹಂಚಿಕೆಗೆ ಕೆಇಎ 2013ರ ಜೂನ್ 3ರಿಂದ ಮೂಲ ದಾಖಲೆಗಳ ಪರಿಶೀಲನೆ ನಡೆಸಿತ್ತು.

ಇದಕ್ಕೂ ಸ್ವಲ್ಪ ಮುನ್ನ ಅಂದರೆ ಮೇ 24ರಂದು ಚಕ್ರವರ್ತಿ ಮೋಹನ್ ಅಧಿಸೂಚನೆ ಹೊರಡಿಸಿ, ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲೂ ಪ್ರವರ್ಗ ಬದಲಾವಣೆಗೆ ಅರ್ಜಿ ಸಲ್ಲಿಸಬಹುದು ಎಂಬ ಅಂಶ ಸೇರಿಸಿದ್ದರು. ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ‘ಸಾಮಾನ್ಯ’ ಪ್ರವರ್ಗ ನಮೂದಿಸಿದ್ದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ–1, 2ಎ, 3ಎ ಮತ್ತು 3ಬಿ ಪ್ರವರ್ಗಗಳಿಗೆ ಬದಲಾವಣೆ ಕೋರಲು ಈ ಅಧಿಸೂಚನೆಯಲ್ಲಿ ಅವಕಾಶ ನೀಡಲಾಗಿತ್ತು.

ಮೇ 24ರ ಅಧಿಸೂಚನೆಯ ಆಧಾರದಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವರ್ಗ ಬದಲಾವಣೆ ಮೂಲಕ ಸೀಟು ಹಂಚಿಕೆ ಮಾಡಲಾಗಿದೆ. ಈ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಕೆಇಎ ಆಂತರಿಕ ವಿಚಾರಣಾ ಸಮಿತಿಗೆ ನಿರ್ದೇಶನ ನೀಡಿದೆ. ಸಮಿತಿಯು ವರದಿ ಸಲ್ಲಿಸಿದ ಬಳಿಕ ಈ ಬಗ್ಗೆಯೂ ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ ಇದೆ ಎಂದು ಮೂಲಗಳು ತಿಳಿಸಿವೆ.

ಎರಡನೇ ಅಧಿಕಾರಿ
ಚಕ್ರವರ್ತಿ ಮೋಹನ್ ಅವರು ಸಿಇಟಿ ಅವ್ಯವಹಾರ ಪ್ರಕರಣದಲ್ಲಿ ತನಿಖೆ ಎದುರಿಸಲಿರುವ ಎರಡನೇ ಹಿರಿಯ ಅಧಿಕಾರಿ.
ಇವರಿಗಿಂತ ಮೊದಲು ಗ್ರಾಮೀಣ ಮತ್ತು ನಗರ ಮೀಸಲು ಕೋಟಾಗಳನ್ನು ಬದಲಿಸಿ 70 ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಕೆಇಎ ಆಡಳಿತಾಧಿಕಾರಿ ಎಸ್.ಪಿ.ಕುಲಕರ್ಣಿ ಅವರನ್ನು ಅಮಾನತು ಮಾಡಿ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.