ಬೆಂಗಳೂರು: ರಾಯಚೂರಿನ ಇಶಾನ್ ಪಾಠಕ್ ಮತ್ತು ಬೆಂಗಳೂರು ನಗರದ ಜೋಹನ್ನಾ ಅಹಿಲನ್ ಅವರು ಇಲ್ಲಿನ ಪೇಸ್ ಅಕಾಡೆಮಿಯಲ್ಲಿ ನಡೆದ ಯೋನೆಕ್ಸ್- ಸನ್ರೈಸ್ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನವರ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.

ಇಶಾನ್ ಫೈನಲ್ನಲ್ಲಿ 21-15, 22-24, 22-20 ರಿಂದ ಆರನೇ ಶ್ರೇಯಾಂಕದ ದಕ್ಷ್ ಧೋತ್ರದ್ (ಬೆಂಗಳೂರು ನಗರ) ಅವರಿಗೆ ಆಘಾತ ನೀಡಿದರು. ಬಾಲಕಿಯರ ಪ್ರಶಸ್ತಿ ಸುತ್ತಿನಲ್ಲಿ ಜೋಹನ್ನಾ 13-21, 21-18, 21-12 ರಿಂದ ಅಗ್ರ ಶ್ರೇಯಾಂಕದ ಪುಣ್ಯಾ ಎಂ.ಎನ್ (ಬೆಂಗಳೂರು ನಗರ) ಅವರನ್ನು ಹಿಮ್ಮೆಟ್ಟಿಸಿದರು.

ಬಾಲಕರ ಡಬಲ್ಸ್ನಲ್ಲಿ ರಾಯಚೂರಿನ ಇಶಾನ್ ಮತ್ತು ರೋಹನ್ ಕೆ. 23-21, 21-13ರಿಂದ ಬೆಂಗಳೂರು ನಗರದ ದಕ್ಷ್ ಮತ್ತು ಸಂಶ್ರೆ ಸುನಿಲ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದಿತು.

ಬಾಲಕಿಯರ ಡಬಲ್ಸ್ನಲ್ಲಿ ಬೆಂಗಳೂರು ನಗರದ ಜೋಹನ್ನಾ ಮತ್ತು ಪುಣ್ಯಾ ಜೋಡಿಯು 17-21, 21-14, 21-10ರಿಂದ ಬೆಂಗಳೂರು ನಗರದ ದಕ್ಷಿತಾ ಮುಂಡ್ಲಾ ಮತ್ತು ಜನ್ಯಶ್ರೀ ಬಿ, ಜೋಡಿಯನ್ನು ಸೋಲಿಸಿ ಚಾಂಪಿಯನ್ ಆಯಿತು.

ಅಗಸ್ತ್ಯ ಚಾಂಪಿಯನ್: 11 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ಬೆಂಗಳೂರು ನಗರದ ಅಗಸ್ತ್ರ ಎ. ಗೆದ್ದುಕೊಂಡರು. ಅವರು ಫೈನಲ್ನಲ್ಲಿ 21-17, 21-17ರಿಂದ ಬೆಂಗಳೂರು ಗ್ರಾಮಾಂತರದ ದಕ್ಷ್ ರಘುನಂದ ಅಯ್ಯಂಗಾರ್ ಅವರನ್ನು ಮಣಿಸಿದರು.

ಬಾಲಕಿಯ ಪ್ರಶಸ್ತಿ ಬೆಂಗಳೂರು ನಗರದ ಶ್ರೀಯಾ ಎ. ರಾವ್ ಪಾಲಾಯಿತು. ಅವರು ಪ್ರಶಸ್ತಿ ಸುತ್ತಿನಲ್ಲಿ 21-13, 21-18ರಿಂದ ಬೆಂಗಳೂರು ನಗರದ ಯಶೋನಿಧಿ ಟಿ. ಅವರನ್ನು ಸೋಲಿಸಿದರು.

ಬೆಂಗಳೂರು ನಗರದ ನೀವ್ ಶುಶ್ರುತ್ ಮತ್ತು ಪ್ರಣವ್ ಎನ್. ಜೋಡಿ ಬಾಲಕರ ಡಬಲ್ಸ್ ಫೈನಲ್ನಲ್ಲಿ 21-9 21-6ರಿಂದ ಜೆ.ಪಿ. ಪಾರ್ಥಿವ್ ಸಾಮಾನ್ಯು ಮತ್ತು ಸೆಲ್ವಪ್ರಾಣೇಶ್ ಸೆಲ್ವಪ್ರಭು ವಿರುದ್ಧ ಗೆದ್ದಿತು.

ಬಾಲಕಿಯರ ಡಬಲ್ಸ್ ಪ್ರಶಸ್ತಿ ಸುತ್ತಿನಲ್ಲಿ ಬೆಂಗಳೂರು ನಗರದ ನಿಹಾರಿಕಾ ರಾಜ್ ಮತ್ತು ಶ್ರೀಯಾ 21-13, 22-20ರಿಂದ ಕ್ರಿಶಾ ಸಿಂಘದೇವ್ ಮತ್ತು ಖುಷಿ ಆರ್. ಅವರನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.