ಬೆಂಗಳೂರು: `ಗಂಡ ಹೆಂಡತಿ ಪರಸ್ಪರ ಪ್ರೀತಿಸುವಂತೆ ಯಾವುದೇ ಕಾನೂನನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನನಗೆ ಕಾನೂನಿನಲ್ಲಿ ನಂಬಿಕೆಯಿಲ್ಲ~ ಎಂದು ಕಾನೂನು ಆಯೋಗ ಅಧ್ಯಕ್ಷ ವಿ. ಎಸ್. ಮಳಿಮಠ್ ಅಭಿಪ್ರಾಯಪಟ್ಟರು.

ರಾಜ್ಯ ಮಹಿಳಾ ಆಯೋಗವು ಸುಮಂಗಲಿ ಸೇವಾ ಆಶ್ರಮದ ಸಹಯೋಗದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ `ಕೌಟುಂಬಿಕ ದೌರ್ಜನ್ಯ- ಮಹಿಳೆಯರ ಮತ್ತು ಮಹನೀಯರ ಸಮಸ್ಯೆಗಳು~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಕೌಟುಂಬಿಕ ಮಟ್ಟದಲ್ಲಿ ಸಂಬಂಧಗಳನ್ನು ಬೆಸೆಯಲು ಕಾನೂನಿನಿಂದ ಸಾಧ್ಯವಿಲ್ಲ. ಸಂಸ್ಕೃತಿ, ಸಂಪ್ರದಾಯಗಳು ಮಾತ್ರ ಸಂಬಂಧಗಳನ್ನು ಉಳಿಸಬಲ್ಲದು. ಈ ವಿಚಾರದ ಬಗ್ಗೆ ಕಾನೂನು ರಚಿಸುವ ನನಗೆ ಸ್ಪಷ್ಟ ಅರಿವಿದೆ~ ಎಂದ ಅವರು, `ಭಾರತೀಯ ಸಂಸ್ಕೃತಿಯಲ್ಲಿ ಗಂಡ ಹೆಂಡತಿ ಪರಸ್ಪರ ಕರ್ತವ್ಯವನ್ನು ಹಂಚಿಕೊಂಡು ಬದುಕಬೇಕು.

ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯ ಹಕ್ಕು ಪ್ರತಿಪಾದನೆಯ ಫಲವಾಗಿ ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಕೌಟುಂಬಿಕ ಕಲಹಗಳು ಹೆಚ್ಚುತ್ತಿವೆ. ಇದಕ್ಕೆ ಯಾವುದೇ ಕಾನೂನಿನ ಚೌಕಟ್ಟನ್ನು ಒದಗಿಸಲು ಸಾಧ್ಯವಿಲ್ಲ~ ಎಂದು ಪ್ರತಿಪಾದಿಸಿದರು.

`ಈಗಿನ ಪೀಳಿಗೆ ತೀವ್ರವಾಗಿ ಪ್ರೀತಿಸುವ ಗುಣವನ್ನು ಕಳೆದುಕೊಂಡಿದೆ. ಪ್ರೀತಿಯಿದ್ದ ಮೇಲೆ ಕೌಟುಂಬಿಕ ದೌರ್ಜನ್ಯ ಎನ್ನುವ ಪ್ರಶ್ನೆಯೇ ಬಾರದು. ಗಂಡ ಹೆಂಡತಿ ಪರಸ್ಪರ ಪ್ರೀತಿಸಲು ಕಲಿಯಿರಿ. ಎಲ್ಲ ತಪ್ಪುಗಳನ್ನು ಪ್ರೀತಿಯ ದೃಷ್ಟಿಕೋನದಿಂದಲೇ ವಿಮರ್ಶಿಸಿದರೆ ದೌರ್ಜನ್ಯ , ದಬ್ಬಾಳಿಕೆ ಮಾಯವಾಗಿ ಸಾಮರಸ್ಯ ಇರುತ್ತದೆ. ವೇಗವಾಗಿ ಬೆಳೆಯುತ್ತಿರುವ ಪ್ರಪಂಚಕ್ಕೆ ತೆರೆದುಕೊಂಡಿರುವುದರಿಂದ ಯಾವುದೇ ಸಮಸ್ಯೆ ಬಂದರೂ ಗಂಡ-ಹೆಂಡತಿಯರಿಬ್ಬಲ್ಲೂ ತಾಳ್ಮೆ, ಸಹನೆ ಮತ್ತು ಪ್ರೀತಿಯಿರಲಿ~ ಎಂದು ಸಲಹೆ ನೀಡಿದರು.

ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, `ಕುಟುಂಬದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದರೊಂದಿಗೆ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಪುರುಷರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗಿದೆ. ಈ ಎರಡು ವಿಚಾರಗಳ ಬಗ್ಗೆ ಸೂಕ್ತ ಪರಿಹಾರ ಹುಡುಕುವ ಅಗತ್ಯವಿದೆ~ ಎಂದು ತಿಳಿಸಿದರು.

ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವಿ. ಎಸ್. ಕುಬೇರ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.