ಬೆಂಗಳೂರು: ಲೋಕಸಭೆಗೆ ನಾವು ಆರಿಸಿ ಕಳುಹಿಸಿದ ಸದಸ್ಯರಿಗೆ ಲೋಕಸಭೆಯಲ್ಲಿ ಕನಿಷ್ಠ ಪಕ್ಷ ಪ್ರಶ್ನೆ ಕೇಳಲೂ ಪುರುಸೊತ್ತಿಲ್ಲ!

ಈ ಅಂಶವನ್ನು ಬೆಂಗಳೂರಿನ ರಿಜೋರ್ಸ್ ಸಂಶೋಧನಾ ಪ್ರತಿಷ್ಠಾನದ ಅಧ್ಯಯನ ಬಹಿರಂಗಗೊಳಿಸಿದೆ.

ಕಳೆದ 5 ವರ್ಷದಲ್ಲಿ ನಮ್ಮ ರಾಜ್ಯದಿಂದ ಆಯ್ಕೆಯಾಗಿ ಹೋದ 31 ಜನ ಸದಸ್ಯರು ಒಟ್ಟಾರೆಯಾಗಿ 8552 ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯದ ಸಂಸದೆ ರಮ್ಯಾ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ.

ಚಿತ್ರದುರ್ಗದ ಜನಾರ್ದನಸ್ವಾಮಿ, ವಿಜಾಪುರದ ರಮೇಶ ಜಿಗಜಿಣಗಿ, ಬೀದರ್ ಕ್ಷೇತ್ರದ ಧರ್ಮಸಿಂಗ್, ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸದಸ್ಯರಾದ ಸದಾನಂದ ಗೌಡ ಮತ್ತು ಜಯಪ್ರಕಾಶ ಹೆಗ್ಡೆ ಅವರು ನೂರಕ್ಕಿಂತ ಕಡಿಮೆ ಪ್ರಶ್ನೆ ಕೇಳಿದ್ದಾರೆ.

ಮಾಜಿ ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಲೋಕಸಭೆಯಲ್ಲಿ ಪ್ರಶ್ನೆ ಕೇಳದೇ ಇರುವುದು ಸರಿಯಲ್ಲ. ಇದರಿಂದ ಮತದಾರರಿಗೆ ಮತ್ತು ರಾಜ್ಯಕ್ಕೆ ಅನ್ಯಾಯ ಮಾಡಿದಂತೆ ಅಲ್ಲವೇ ಎಂದು ವರದಿಯಲ್ಲಿ ಪ್ರಶ್ನೆ ಮಾಡಲಾಗಿದೆ.

ಕೇವಲ 26 ದಿನ ಅಧಿವೇಶನದಲ್ಲಿ ಭಾಗಿಯಾಗಿದ್ದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸದಸ್ಯ ಡಿ.ಕೆ.ಸುರೇಶ್ ಅವರು 5 ಪ್ರಶ್ನೆ ಕೇಳಿದ್ದಾರೆ.

ದಾವಣಗೆರೆಯ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಒಟ್ಟಾರೆ 861 ಪ್ರಶ್ನೆಗಳನ್ನು ಕೇಳಿದ್ದಾರೆ. ಇಡೀ ದೇಶದಲ್ಲಿ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದ ಆನಂದರಾವ್ ವಿಠೋಬ ಅವರು 1223 ಪ್ರಶ್ನೆಗಳನ್ನು ಕೇಳುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಲೋಕಸಭೆಯ ಎಲ್ಲ ಸದಸ್ಯರು ಕೇಳಿದ ಪ್ರಶ್ನೆಗಳನ್ನು ಪರಿಗಣಿಸಿದರೆ ಪ್ರತಿ ಸದಸ್ಯರು ಕೇಳಿದ ಪ್ರಶ್ನೆ ಸರಾಸರಿ ಅಖಿಲ ಭಾರತದ

ಮಟ್ಟದ್ದು ಶೇ 9.39. ಆದರೆ ಕರ್ನಾಟಕದ ಸದಸ್ಯರದ್ದು ಶೇ 0.73.

ಸಕಾರಣವಿಲ್ಲದೆ ಪ್ರಶ್ನೆ ಮಾಡುವುದು ಹಾಗೂ ನಿರ್ದಿಷ್ಟ ಗುರಿ ಇಲ್ಲದೆ ಪ್ರಶ್ನೆ ಕೇಳುವುದು ಲೋಕಸಭೆಯ ಸಮಯವನ್ನು ವ್ಯರ್ಥ ಮಾಡಿದಂತೆ. ಈ ಹಿನ್ನೆಲೆಯಲ್ಲಿ ಪೂರಕ ಪ್ರಶ್ನೆಗಳು, ಭರವಸೆ ಮತ್ತು ಅದರ ಬೆನ್ನುಹತ್ತಿ ಪರಿಶೀಲನೆ ಹಾಗೂ ಅರ್ಧ ಗಂಟೆ ಚರ್ಚೆಗೆ ಭಾಗವಹಿಸಿರುವುದನ್ನು ಪರಿಗಣಿಸಿ ಸದಸ್ಯರ ಸಾಧನೆಯನ್ನು ಅಳೆಯಲಾಗಿದೆ.

ರಾಜ್ಯದ ಎಲ್ಲ ಸದಸ್ಯರೂ ಸೇರಿ ಕಳೆದ 5 ವರ್ಷದಲ್ಲಿ ಕೇಳಿದ ಪೂರಕ ಪ್ರಶ್ನೆಗಳ ಸಂಖ್ಯೆ 24. ಕೇವಲ 13 ಸದಸ್ಯರು ಪೂರಕ ಪ್ರಶ್ನೆಗಳನ್ನು ಕೇಳಿದ್ದಾರೆ. ದೇಶದ ಇತರ ಲೋಕಸಭಾ ಸದಸ್ಯರ ಸಾಧನೆಗಳಿಗಿಂತ ನಮ್ಮ ರಾಜ್ಯದ ಸದಸ್ಯರ ಸಾಧನೆ ಕಳಪೆಯಾಗಿದೆ.

ಡಿ.ಕೆ.ಸುರೇಶ್, ಜಿ.ಎಂ.ಸಿದ್ದೇಶ್ವರ, ಪ್ರಹ್ಲಾದ ಜೋಶಿ, ಎಸ್.ಫಕೀರಪ್ಪ ಅವರು ಸಚಿವರಾದವರಲ್ಲ. ಆದರೂ ಸಂಸತ್ತಿನಲ್ಲಿ ಅವರ ಸಾಧನೆ ನಮ್ಮ ರಾಜ್ಯದಿಂದ ಹೋದ ಕೇಂದ್ರ ಸಚಿವರಿಗಿಂತ ಕಡಿಮೆ ಏನಲ್ಲ. ರಾಜ್ಯದ ಸಂಸದರಿಗೆ ಸಂಸತ್ತಿನಲ್ಲಿ ನೀಡಲಾದ ಭರವಸೆಗಳಲ್ಲಿ ಶೇ 61.85 ಭರವಸೆಗಳು ಈಡೇರಿವೆ. ಉಳಿದ ಭರವಸೆಗಳು ವಿವಿಧ ಹಂತದಲ್ಲಿವೆ. 226 ಭರವಸೆಗಳು ಇನ್ನೂ ಈಡೇರಿಲ್ಲ. ಇದಕ್ಕೆ ಪ್ರಶ್ನೆ ಕೇಳಿದ ಸದಸ್ಯರು ಅದನ್ನು ಬೆನ್ನು ಹತ್ತಿಲ್ಲ.

ರಾಜ್ಯದ ಸದಸ್ಯರು ಕೇಳಿದ 8552 ಪ್ರಶ್ನೆಗಳ ಪೈಕಿ ಯಾವುದೇ ಪ್ರಶ್ನೆಯನ್ನು ಕಳೆದ 5 ವರ್ಷದಲ್ಲಿ ಒಮ್ಮೆಯೂ ಅರ್ಧಗಂಟೆ ಚರ್ಚೆಗೆ ತೆಗೆದುಕೊಂಡಿಲ್ಲ. ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗಳಲ್ಲಿ ಅರ್ಧದಷ್ಟು ಪ್ರಶ್ನೆಗಳನ್ನು ದಕ್ಷಿಣ ಕರ್ನಾಟಕದ ಸದಸ್ಯರೇ ಕೇಳಿದ್ದಾರೆ.

ಆದರೆ ಪರಿಣಾಮಕಾರಿ ಪ್ರಶ್ನೆ ಕೇಳುವುದರಲ್ಲಿ ದಕ್ಷಿಣ ಕರ್ನಾಟಕದ ಸದಸ್ಯರಿಗಿಂತ ಮುಂಬೈ ಕರ್ನಾಟಕದ ಸದಸ್ಯರು ಮುಂದಿದ್ದಾರೆ.

ಸರಾಸರಿ ಪ್ರಮಾಣದಲ್ಲಿ ಪ್ರಶ್ನೆ ಕೇಳಿರುವುದನ್ನು ಪರಿಗಣಿಸಿದರೆ ಹೈದರಾಬಾದ್ ಕರ್ನಾಟಕದ ಸದಸ್ಯರು ಸರಾಸರಿ 403.5 ಪ್ರಶ್ನೆ ಕೇಳಿದ್ದಾರೆ ಮತ್ತು ರಾಜ್ಯದ ಇತರ ಭಾಗದ ಸದಸ್ಯರಿಗಿಂತ ಮುಂದೆ ಇದ್ದಾರೆ.

ಬಿಜೆಪಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದರಿಂದ ಆ ಪಕ್ಷದ ಸದಸ್ಯರು ಕೇಳಿದ ಪ್ರಶ್ನೆಗಳೂ ಅಧಿಕವಾಗಿವೆ. ಒಟ್ಟಾರೆ 6660 ಪ್ರಶ್ನೆಯನ್ನು ಬಿಜೆಪಿ ಸದಸ್ಯರು ಕೇಳಿದ್ದಾರೆ. ಕಾಂಗ್ರೆಸ್ ಸದಸ್ಯರು 1066 ಮತ್ತು ಜೆಡಿಎಸ್ ಸದಸ್ಯರು 826 ಪ್ರಶ್ನೆ ಕೇಳಿದ್ದಾರೆ. ಜೆಡಿಎಸ್ ಸದಸ್ಯರಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಒಂದೇ ಪ್ರಶ್ನೆ ಕೇಳಿಲ್ಲ. ಚೆಲುವರಾಯಸ್ವಾಮಿ ಒಬ್ಬರೇ ಪ್ರಶ್ನೆಗಳನ್ನು ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.