ಬೆಂಗಳೂರು: ಉದ್ಯಮಿ ಆರ್.ಎನ್.ನಾಯಕ ಅವರನ್ನು ಕೊಲೆ ಮಾಡಿದ ಗುಂಪಿನ ಸದಸ್ಯರಲ್ಲಿ ಒಬ್ಬನಾದ ಸತೀಶ್ ಅಲಿಯಾಸ್ ಜಗದೀಶ್ ಪಾಟೀಲ್ (19) ಎಂಬಾತನನ್ನು ಘಟನಾ ಸ್ಥಳದಲ್ಲೇ ಬಂಧಿಸಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.

‘ನಾಯಕ ಅವರ ಗನ್ಮ್ಯಾನ್ ಹಾರಿಸಿದ ಗುಂಡಿಗೆ ಬಲಿಯಾದವನ ಹೆಸರು ವಿವೇಕ್ಕುಮಾರ್ ಉಪಾಧ್ಯಾಯ (27). ಸತೀಶ್ ಮತ್ತು ವಿವೇಕ್ ಇಬ್ಬರೂ ಉತ್ತರಪ್ರದೇಶದ ವಾರಾಣಸಿಯವರು’ ಎಂದು ಹೇಳಿದರು.

ಈ ವ್ಯವಸ್ಥಿತ ಸಂಚಿನ ಹಿಂದೆ ಹಲವರ ಪಾತ್ರ ಇದೆ. ನಾಯಕ್ ಅವರಿಗೆ ಎರಡು ವರ್ಷಗಳಿಂದ ಜೀವ ಬೆದರಿಕೆ ಇತ್ತು. ಭೂಗತ ಪಾತಕಿಗಳು ಅವರಿಗೆ ಆಗಾಗ್ಗೆ ಕರೆ ಮಾಡಿ ಹಣ ಕೊಡುವಂತೆ ಬೆದರಿಕೆ ಹಾಕುತ್ತಿದ್ದರು. ಈ ಕಾರಣಕ್ಕಾಗಿ ಇಲಾಖೆಯಿಂದ ಅವರಿಗೆ ಗನ್ಮ್ಯಾನ್ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು.

ನಗದು ಬಹುಮಾನ
ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೆಬಲ್ ರಮೇಶ್ಗೌಡ ಅವರಿಗೆ ₨ 25 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಅವರು ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆರೋಪಿಗಳ ಮೇಲೆ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾರೆ. ಅವರ ಸಮಯಪ್ರಜ್ಞೆ ಮತ್ತು ಧೈರ್ಯ ಪ್ರಶಂಸನೀಯ ಎಂದು ರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.