ಕಾಗವಾಡ (ಬೆಳಗಾವಿ ಜಿಲ್ಲೆ): ಚುನಾವಣೆ ನೀತಿ ಸಂಹಿತೆ ಜಾರಿ ಇದ್ದರೂ ಸಮೀಪದ ಜುಗೂಳದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಚಿವರು ಭಾರಿ ಪ್ರಮಾಣದಲ್ಲಿ ಆಶ್ವಾಸನೆ ನೀಡಿದ ಘಟನೆ ನಡೆಯಿತು.

‘ಸದ್ಯ ನೀತಿ ಸಂಹಿತೆ ಜಾರಿ ಇರುತ್ತದೆ, ನಾನೇನೂ ಹೆಚ್ಚು ಹೇಳುವುದಿಲ್ಲ, ಜುಗೂಳದಲ್ಲಿಯೇ ಸಾಂಸ್ಕೃತಿಕ ಭವನ ಅಥವಾ ಸಮುದಾಯ ಭವನಕ್ಕೆ ನನ್ನ ಇಲಾಖೆಯಿಂದ ಒಂದು ಕೋಟಿ ರೂ. ಮಂಜೂರು ಮಾಡುವೆ....’ ಎಂದು ಸಕ್ಕರೆ ಮತ್ತು ಮುಜರಾಯಿ ಸಚಿವ ಪ್ರಕಾಶ ಹುಕ್ಕೇರಿ ಭರವಸೆ ನೀಡಿದರು. ಆಗ ವೇದಿಕೆಯಲ್ಲಿದ್ದ ಮುಖಂಡರು ಕೆಲ ಕ್ಷಣ ಕಕ್ಕಾಬಿಕ್ಕಿಯಾಗಿ ಸಚಿವರತ್ತ ನೋಡತೊಡಗಿದರು.
ಆಗ ಸುಧಾರಿಸಿಕೊಂಡ ಸಚಿವರು, ನಾನೇನೂ ಹೆಚ್ಚಿಗೆ ಭರವಸೆ ನೀಡುವುದಿಲ್ಲ’ ಎಂದು ಸಮಜಾಯಿಷಿ ನೀಡಿ ಮಾತು ಮುಗಿಸಿದರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.