ಬೆಂಗಳೂರು: ಪ್ರಶ್ನೆಪತ್ರಿಕೆ ಬಹಿರಂಗ ಆಗಿರುವುದನ್ನೇ ನೆಪ ಮಾಡಿಕೊಂಡು ದಕ್ಷ ಅಧಿಕಾರಿಯಾದ, ಪದವಿಪೂರ್ವ ಶಿಕ್ಷಣ ಇಲಾಖೆಯ ಆಯುಕ್ತೆ ವಿ. ರಶ್ಮಿ ಅವರ ಎತ್ತಂಗಡಿಗೆ ಲಾಬಿ ನಡೆದಿದೆ ಎನ್ನಲಾಗಿದೆ. ಖಾಸಗಿಯವರ ಲಾಬಿಗೆ ಕಡಿವಾಣ ಹಾಕಿ, ಇಲಾಖೆಯಲ್ಲಿ ಸುಧಾರಣೆ ತರಲು ಹೊರಟಿರುವ ರಶ್ಮಿ ಅವರು ಮೊದಲಿನಿಂದಲೂ ಖಾಸಗಿ ಕಾಲೇಜುಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಕಳೆದ ವರ್ಷ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಸೀಟ್ ಬ್ಲಾಕಿಂಗ್ ಹಾವಳಿಗೆ ಕಡಿವಾಣ ಹಾಕಿದ್ದರಿಂದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ವಾಮ ಮಾರ್ಗದ ಮೂಲಕ ಸೀಟುಗಳನ್ನು ಮಾರಾಟ ಮಾಡುವ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿತ್ತು.

ಪಿಯು ಹಂತದಲ್ಲಿನ ಟ್ಯೂಷನ್ ಲಾಬಿಗೆ ಕಡಿವಾಣ ಹಾಕಲು ಪ್ರಥಮ ಪಿಯುಸಿ ಪ್ರವೇಶಕ್ಕೆ ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಲು ರಶ್ಮಿ ಸಿದ್ಧತೆ ನಡೆಸಿದ್ದರು. ಇದು ಜಾರಿಗೆ ಬಂದರೆ ಹಣ ಮಾಡುವ ದಂಧೆಗೆ ಕಡಿವಾಣ ಬೀಳುತ್ತದೆ. ಶೇಕಡ 50ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗುತ್ತದೆ ಎಂಬ ದೃಷ್ಟಿಯಿಂದ ಖಾಸಗಿ ಕಾಲೇಜುಗಳು ಆರಂಭದಿಂದಲೇ ಈ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

ಈಗ ಪ್ರಶ್ನೆ ಪತ್ರಿಕೆಗಳು ಬಹಿರಂಗ ಆಗಿರುವುದನ್ನೇ ನೆಪ ಮಾಡಿಕೊಂಡು ರಶ್ಮಿ ಅವರ ಎತ್ತಂಗಡಿಗೆ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿದೆ. ಅಲ್ಲದೆ, ಸರ್ಕಾರದ ಪರವಾಗಿರುವ ಕೆಲವು ಸಂಘಟನೆಗಳೂ ಇದಕ್ಕೆ ಬೆಂಬಲ ಸೂಚಿಸಿವೆ ಎಂದು ಮೂಲಗಳು ತಿಳಿಸಿವೆ.

ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಂದ ಚುನಾಯಿತರಾಗಿರುವ ವಿಧಾನ ಪರಿಷತ್ತಿನ ಕೆಲವು ಸದಸ್ಯರು ರಶ್ಮಿ ಅವರ ವರ್ಗಾವಣೆಗೆ ಒತ್ತಡ ಹೇರುತ್ತಿದ್ದಾರೆ ಎಂದು ಗೊತ್ತಾಗಿದೆ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಶಾಸಕರು, ಖಾಸಗಿ ಕಾಲೇಜುಗಳ ಪರವಾಗಿ ಲಾಬಿ ಮಾಡುತ್ತಿದ್ದಾರೆ.

ಪೋಷಕರ ವಿರೋಧ: `ರಶ್ಮಿ ಅವರು ಎತ್ತಂಗಡಿಯಾದರೆ ಪರೀಕ್ಷಾ ವ್ಯವಸ್ಥೆ ಮತ್ತಷ್ಟು ಹಾಳಾಗಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಸರ್ಕಾರ ಮಣಿದಂತಾಗುತ್ತದೆ. ಸಿಇಟಿ ವ್ಯವಸ್ಥೆ ಹಾಳಾಗಲಿದೆ. ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು~ ಎಂದು ಪೋಷಕರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

`ಪ್ರಶ್ನೆ ಪತ್ರಿಕೆ ಬಹಿರಂಗವಾಗಲು ದುಷ್ಟ ಶಕ್ತಿಗಳೊಂದಿಗೆ ಕೈಜೋಡಿಸಿರುವ ಇಲಾಖೆಯಲ್ಲಿನ ಕೆಳ ಹಂತದ ಸಿಬ್ಬಂದಿಯನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆ ಹೊರತು ರಶ್ಮಿ ಅವರ ವಿರುದ್ಧ ಅಲ್ಲ~ ಎಂದು ಪೋಷಕರು, ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

`ಸೂಕ್ತ ಕ್ರಮ~: ಪ್ರಸ್ತುತ ನಡೆಯುತ್ತಿರುವ ಪಿಯು ಪರೀಕ್ಷೆಗಳು ಮುಗಿದ ನಂತರ ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸದಾನಂದ ಗೌಡ ತಿಳಿಸಿದರು.

ಪಿಯು ಪ್ರಶ್ನೆಪತ್ರಿಕೆಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ `ಪ್ರಜಾವಾಣಿ~ಯ ಜೊತೆ ಮಾತನಾಡಿದ ಅವರು, `ಇಂಥ ಸಮಸ್ಯೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಪ್ರಶ್ನೆಪತ್ರಿಕೆ ಬಹಿರಂಗಗೊಂಡಿರುವ ವಿಚಾರವನ್ನು ಪ್ರತ್ಯೇಕವಾಗಿ ನೋಡಬೇಕಾದ ಅಗತ್ಯ ಇಲ್ಲ. ವ್ಯವಸ್ಥೆಯಲ್ಲಿನ ದೋಷದ ಕಾರಣ ಇಂಥ ಘಟನೆಗಳು ಪ್ರತಿವರ್ಷ ಸಂಭವಿಸುತ್ತಿವೆ. ಪ್ರಶ್ನೆಪತ್ರಿಕೆ ಬಹಿರಂಗ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ. ವ್ಯವಸ್ಥೆಯಲ್ಲಿ ಲೋಪ ಎಲ್ಲಿದೆ ಎಂಬುದು ಈ ತನಿಖೆಯಿಂದ ಗೊತ್ತಾಗಲಿದೆ~ ಎಂದು ಹೇಳಿದರು.

`ಪ್ರಶ್ನೆಪತ್ರಿಕೆಗಳು ಹಿಂದೆ ಬಹಿರಂಗವಾಗಿದ್ದ ಘಟನೆಗಳ ಕುರಿತೂ ತನಿಖೆ ನಡೆಸುವಂತೆ ಸಿಐಡಿ ಮತ್ತು ಸಿಸಿಬಿ ಪೊಲೀಸರಿಗೆ ತಿಳಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ದೋಷಗಳನ್ನು ಇಲ್ಲವಾಗಿಸಲು ಪದವಿಪೂರ್ವ ಶಿಕ್ಷಣ ಇಲಾಖೆಗೂ ಸೂಚಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವರ್ಗಾವಣೆ ಮಾಡುವ ಬಗ್ಗೆ ಆದ್ಯತೆ ನೀಡಲಾಗುತ್ತಿದೆ~ ಎಂದರು.

ಹೊಸದಾಗಿ ಪರೀಕ್ಷಾ ಸಿದ್ಧತೆ
ಗಣಿತ, ಭೌತವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಗಳು ಅಷ್ಟೇ ಅಲ್ಲದೆ ರಸಾಯನ ವಿಜ್ಞಾನ ಪ್ರಶ್ನೆ ಪತ್ರಿಕೆಯೂ ಬಹಿರಂಗ ಆಗಿರುವ ಶಂಕೆಯ ಹಿನ್ನೆಲೆಯಲ್ಲಿ ಹೊಸದಾಗಿ ಪರೀಕ್ಷಾ ಸಿದ್ಧತೆ ನಡೆಸಲಾಗುತ್ತಿದೆ. ಪ್ರಶ್ನೆ ಪತ್ರಿಕೆಗಳು ಬಹಿರಂಗವಾದ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಕೇವಲ ವೇಳಾಪಟ್ಟಿಯನ್ನಷ್ಟೇ ಪರಿಷ್ಕರಣೆ ಮಾಡಿಲ್ಲ. ಪರೀಕ್ಷಾ ಪ್ರಕ್ರಿಯೆಯನ್ನೇ ಪ್ರಾಥಮಿಕ ಹಂತದಿಂದ ಪುನರಾರಂಭಿಸಿದೆ. ಹೀಗಾಗಿ ಗಣಿತ, ಭೌತವಿಜ್ಞಾನ, ರಸಾಯನ ವಿಜ್ಞಾನ, ಇಂಗ್ಲಿಷ್ ವಿಷಯದ ಪರೀಕ್ಷಾ ಸಿದ್ಧತೆಯನ್ನು ಹೊಸದಾಗಿ ಆರಂಭಿಸಲಾಗಿದೆ.

ಪಿಯುಸಿ ನಂತರ ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಬಯಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಇದರ ದುರ್ಲಾಭ ಪಡೆಯಲು ಸಂಚು ನಡೆಸಿರುವ ದುಷ್ಟ ಶಕ್ತಿಗಳು ಟ್ಯೂಷನ್ ಲಾಬಿಯೊಂದಿಗೆ ಕೈಜೋಡಿಸಿವೆ.

ಪಿ.ಸಿ.ಎಂ.ಬಿ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಬಹಿರಂಗಗೊಳಿಸಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವ ಷಡ್ಯಂತ್ರ ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಲಾಖೆ ಎಚ್ಚೆತ್ತುಕೊಂಡಿದೆ. ಪ್ರಮುಖ ವಿಷಯಗಳಾದ ಗಣಿತ, ಭೌತ ವಿಜ್ಞಾನ, ರಸಾಯನ ವಿಜ್ಞಾನ, ಇಂಗ್ಲಿಷ್ ಪ್ರಶ್ನೆ ಪತ್ರಿಕೆಗಳನ್ನು ಹೊಸದಾಗಿ ಸಿದ್ಧಪಡಿಸಿ ಮುದ್ರಣಕ್ಕೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.