ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿಗ ಗ್ರಾ.ಪಂ ಮಹಿಳಾ ಸದಸ್ಯರ ಸಮವಸ್ತ್ರ ಕ್ರಾಂತಿ

Last Updated 25 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಕೊಪ್ಪ (ಮಂಡ್ಯ ಜಿಲ್ಲೆ):  ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕಾರ್ಖಾನೆ ನೌಕರರು, ಹೋಟೆಲ್‌ಗಳಲ್ಲಿ ಕೆಲಸ ಮಾಡುವವರು, ಆಸ್ಪತ್ರೆ ಸಿಬ್ಬಂದಿ ಸಮವಸ್ತ್ರ ಧರಿಸುವುದನ್ನು ನೋಡಿದ್ದೇವೆ. ಆದರೆ, ಮರಳಿಗ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರು ಸಮವಸ್ತ್ರ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಮದ್ದೂರು ತಾಲ್ಲೂಕು ಕೊಪ್ಪ ಸಮೀಪದ ಮರಳಿಗ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 22 ಮಂದಿ ಸದಸ್ಯರಿದ್ದಾರೆ. ಅದರಲ್ಲಿ 11 ಮಹಿಳಾ ಸದಸ್ಯರು, 11  ಪುರುಷ ಸದಸ್ಯರು ಇದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ 11 ಮಹಿಳಾ ಸದಸ್ಯರು ಚರ್ಚಿಸಿ ಸಮವಸ್ತ್ರ ಧರಿಸಿ ಪಂಚಾಯಿತಿಗೆ ಬರುವ ಮೂಲಕ ನಾವೆಲ್ಲರು ಸಮಾನರು ಎಂದು ತೋರಿಸಿದ್ದಾರೆ.

‘ಒಂದೇ ಬಗೆಯ ಸೀರೆ ಉಟ್ಟು ಗ್ರಾಮ ಪಂಚಾಯಿತಿ ಕಚೇರಿಗೆ ಬರುವುದರಿಂದ ಸಮಾನತೆಯ ಭಾವನೆ ಮೂಡುತ್ತದೆ. ಯಾವುದೇ ಜಾತಿ, ಭೇದ– ಭಾವ ನಮಲ್ಲಿ ಮೂಡುವುದಿಲ್ಲ. ಜತೆಗೆ ಗ್ರಾಮ ಪಂಚಾಯಿತಿಗೆ ಬರುವ ಗ್ರಾಮಸ್ಥರಿಗೆ ಸದಸ್ಯರು ಯಾರು ಎಂದು ಹುಡುಕುವ ಗೊಂದಲವಿರುವುದಿಲ್ಲ. ನಮ್ಮಲ್ಲಿ ಮುಖ್ಯವಾಗಿ ಶಿಸ್ತು ಮೂಡುತ್ತದೆ. ಜನ ನಮನ್ನು ಗ್ರಾಮ ಪಂಚಾಯಿತಿ ಸದಸ್ಯರು ಎಂದು ಗುರುತಿಸುತ್ತಾರೆ’ ಎನ್ನುತ್ತಾರೆ ಈ ಮಹಿಳಾ ಸದಸ್ಯರು.

‘ಮುಂದಿನ ದಿನಗಳಲ್ಲಿ ಪಂಚಾಯಿತಿಯಲ್ಲಿರುವ ಪುರಷ ಸದಸ್ಯರೂ ಸಮವಸ್ತ್ರ ಹಾಕಿಕೊಂಡು ಬರುವಂತೆ  ಹೇಳಲಾಗಿದೆ. ಸಮವಸ್ತ್ರ ತೊಡುವುದರ ಜತೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡಿ ಮಾದರಿ ಗ್ರಾಮ ಪಂಚಾಯಿತಿ ಮಾಡುವುದು ನಮ್ಮ ಧ್ಯೇಯ. ಅಭಿವೃದ್ಧಿ ಮೂಲಕ ಇತರೆ ಪಂಚಾಯಿತಿಗಳಿಗೆ ನಮ್ಮ ಪಂಚಾಯಿತಿ ಮಾದರಿಯಾಗಬೇಕು ಎಂಬುದು ಆಶಯವಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಸಿ.ಪುಟ್ಟಸ್ವಾಮಿ.

***
ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಸಮವಸ್ತ್ರ ಧರಿಸುವುದರಿಂದ ನಮ್ಮನ್ನು ಇಂತಹ ಗ್ರಾ.ಪಂ ಸದಸ್ಯರು ಎಂದು ಗುರುತಿಸುತ್ತಾರೆ.
-ಪುಷ್ಪಾ ಜಯರಾಮು
ಅಧ್ಯಕ್ಷೆ, ಮರಳಿಗ ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT