ಉಡುಪಿ: ಪಡುಬಿದ್ರಿಯಲ್ಲಿ ಕಾರ್ಯಾರಂಭ ಮಾಡಿರುವ ಉಡುಪಿ ಪವರ್ ಕಂಪೆನಿ ಲಿ.(ಯುಪಿಸಿಎಲ್) (ಹಿಂದಿನ ಹೆಸರು ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರ) ಎಷ್ಟರ ಮಟ್ಟಿಗೆ ರಾಜ್ಯದ ವಿದ್ಯುತ್ ಕೊರತೆಗೆ ಪರಿಹಾರ ಒದಗಿಸಲಿದೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ಸದ್ಯ ಹಾರುಬೂದಿ ವಿಲೇವಾರಿ ಸಮಸ್ಯೆಯಿಂದಾಗಿ ಸುತ್ತಲ ಗ್ರಾಮಗಳ ಜನ ಭಾರಿ ‘ಶಾಕ್ಗೆ ಒಳಗಾಗಿರುವುದು ಸ್ಪಷ್ಟಗೋಚರ.

ಪಡುಬಿದ್ರಿ ಎಲ್ಲೂರಿನಲ್ಲಿ ವಿವಾದಗಳ ಮಧ್ಯೆಯೇ 2010ರಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದ ಯುಪಿಸಿಎಲ್, ದಿನ ಕಳೆದಂತೆ ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುತ್ತಿದೆ.ಘಟಕದಲ್ಲಿ ವೈಜ್ಞಾನಿಕ ವಿಧಾನದಲ್ಲಿ ಕೆಲಸ ನಡೆಯುತ್ತಿಲ್ಲ. ವಾಯುಮಾಲಿನ್ಯ, ಹಾರುಬೂದಿ ಸಮಸ್ಯೆ ನಮ್ಮ ಬದುಕನ್ನು ‘ದೂಳಾ’ಗಿಸುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.
ಘಟಕದಿಂದ 2.5 ಕಿ.ಮೀ. ದೂರದಲ್ಲಿ ಸಾಂತೂರು ಎಂಬಲ್ಲಿ ‘ದಡ್ಡಕೆರೆ’(ದೊಡ್ಡಕೆರೆ) ಸದ್ಯದ ವಿವಾದದ ಕೇಂದ್ರಬಿಂದು. ಒಂದು ಕಾಲದಲ್ಲಿ ಕೆರೆಯಾಗಿದ್ದು, ಸುತ್ತಲ ನೂರಾರು ಎಕರೆ ಕೃಷಿಭೂಮಿಗೆ ನೀರುಣಿಸುತ್ತಿದ್ದ ಬೃಹತ್ ಕೆರೆ ಈಗ ‘ಆಶ್ಪಾಂಡ್’ ಆಗಿದೆ. ಇದು ಮತ್ತಷ್ಟು ಸಮಸ್ಯೆ ಹುಟ್ಟುಹಾಕಿದೆ.

ಸ್ಥಾವರದಿಂದ ಹೊರಬೀಳುವ ಕಲ್ಲಿದ್ದಲು ಬೂದಿಯನ್ನು ಟ್ಯಾಂಕರ್, ಟಿಪ್ಪರ್ ಮೂಲಕ ನಿತ್ಯ(40-50 ಲಾರಿ) ಇಲ್ಲಿ ತಂದು ಸುರಿಯಲಾಗುತ್ತದೆ. ಬೂದಿ ಗಾಳಿಗೆ ಹಾರಿ ಸಮೀಪದ ಗದ್ದೆಗಳಲ್ಲಿನ ಭತ್ತದ ಪೈರು, ತೋಟದಲ್ಲಿನ ಕಾಯಿಪಲ್ಲೆ, ಮಾವು-ಗೇರಿನ ಚಿಗುರಿಗೆ ಅಂಟಿಕೊಳ್ಳುತ್ತಿದೆ. ಬಾವಿ ಮತ್ತು ತೊರೆಯ ನೀರು ಆಗಲೇ ಕಲುಷಿತವಾಗಿದೆ. ಈ ಭಾಗದಲ್ಲಿ ವಿಶೇಷವಾಗಿ ಮಲ್ಲಿಗೆ ಕೃಷಿ ಎಲ್ಲ ಮನೆಗಳಲ್ಲಿತ್ತು. ಈಗ ಬಹಳಷ್ಟು ಕಡೆ ಮಲ್ಲಿಗೆ ಕೃಷಿ ಇಲ್ಲವಾಗಿದೆ, ನಿತ್ಯ ಹಾರಿಬಂದು ಅಂಟಿಕೊಳ್ಳುವ ಬೂದಿಯಿಂದಾಗಿ ಬಿಳಿ ಮಲ್ಲಿಗೆ ನಲುಗುತ್ತಿದೆ.

ಸ್ಥಳೀಯರ ಶ್ವಾಸಕೋಶಕ್ಕೂ ಬೂದಿ ದಾಳಿಯಿಟ್ಟಿದೆ. ದಮ್ಮು, ಕೆಮ್ಮು, ಉಬ್ಬಸ, ಉಸಿರಾಟದ ತೊಂದರೆ, ಚರ್ಮರೋಗ ಕಾಣಿಸಿಕೊಳ್ಳಲಾರಂಭಿಸಿದೆ. ಈ ಮಾರ್ಗದಲ್ಲಿಯೇ ಶಾಲೆಗೆ ತೆರಳಬೇಕಿರುವ ಪುಟ್ಟ ವಿದ್ಯಾರ್ಥಿಗಳಿಗೂ ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆ ಎದುರಾಗಿದೆ. ‘ಹಾರುಬೂದಿ ಕಾಣಿಸಿಕೊಂಡ ನಂತರ ಪರಿಸರದಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಿದೆ.ಬರುವ ರೋಗಿಗಳ ಸಂಖ್ಯೆಯಲ್ಲಿಯೂ ಶೇ. 20-30ರಷ್ಟು ಹೆಚ್ಚಳವಾಗಿದೆ’ ಎನ್ನುತ್ತಾರೆ ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್.ಜಿ.ಜಗದೀಶ್.
ಹಾರುಬೂದಿ ವಿರುದ್ಧ ಭಾರಿ ಪ್ರತಿಭಟನೆ ನಡೆಯುತ್ತಿವೆ.

ಹಾರುಬೂದಿ ವಿಲೇವಾರಿ ಸಂಬಂಧ ಕಂಪೆನಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆಯನ್ನಷ್ಟೇ ನೀಡಿದೆ. ಈ ಮಧ್ಯೆ, ಸ್ಥಳಕ್ಕೆ ಭೇಟಿ ನೀಡಿದ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ರಾಜಕಾರಣಿಗಳು ಕಂಪೆನಿಗೆ ಮಾ. 3ರವರೆಗೆ ಗಡುವು ನೀಡಿದ್ದಾರೆ. ಇದರಿಂದ ಎಚ್ಚೆತ್ತಂತೆ ಕಂಡ ಯುಪಿಸಿಎಲ್, ‘ಹಾರುಬೂದಿ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನೀರು ಹರಿಸುವ ಮೂಲಕ ಬೂದಿ ಹಾರದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿತ್ತು.

ಆದರೆ ‘ಪ್ರಜಾವಾಣಿ’ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದಾಗ, ‘ಯಾರಾದರೂ ಸ್ಥಳಕ್ಕೆ ಬರುವುದು ಕಂಡಾಗಲಷ್ಟೇ ಹಾರುಬೂದಿಗೆ ನೀರು ಹನಿಸುತ್ತಾರೆ, ನಂತರ ಬಂದ್ ಮಾಡುತ್ತಾರೆ’ ಎಂದು ಸ್ಥಳಿಯರು ದೂರಿದರು. ಕಂಪೆನಿ ಪ್ರತಿಪಾದನೆ: ವಿಶಾಲವಾದ ಕೆರೆಯ ಅಂಚಿಗೆ ಕಾಂಕ್ರಿಟೀಕರಣ ಮಾಡಲಾಗಿದ್ದು, ಬೂದಿ ಸುರಿಯಲಾಗುತ್ತಿದೆ. ನಂತರ ಸಮುದ್ರದ ನೀರು ಬಿಟ್ಟು ದ್ರವರೂಪಕ್ಕೆ ತರಲಾಗುತ್ತದೆ. ಸಮೀಪದಲ್ಲಿ ನಿರ್ಮಾಣಗೊಳ್ಳಲಿರುವ ಎಸಿಸಿ ಸಿಮೆಂಟ್ ಘಟಕಕ್ಕೆ ಒಯ್ಯಲಾಗುತ್ತದೆ ಎಂದು ಕಂಪೆನಿ ಅಧಿಕಾರಿಗಳು ಹೇಳುತ್ತಾರೆ.

ಪತ್ರಿಕೆ ಭೇಟಿ ನೀಡಿದ್ದನ್ನು ಕಂಡ ಕಾರ್ಮಿಕರು ಕೂಡಲೇ ಕೊಳವೆಗಳಿಂದ ಹಾರುಬೂದಿ ಕೆರೆಗೆ ಬಿಟ್ಟರು. ಭಾರಿ ಪ್ರಮಾಣದಲ್ಲಿ ದ್ರವರೂಪದ ಬೂದಿ ಬಂದಿದ್ದರಿಂದ ಮೂಗು ಮುಚ್ಚಿ ಓಡಾಡುವಂತಾಗಿದೆ. ಮರಗಿಡಗಳೂ ಬೂದಿಬಡಿದುಕೊಂಡಿವೆ. ಅರಬ್ಬಿ ಸಮುದ್ರದ ನೀರನ್ನು 6 ಕಿ.ಮೀ. ದೂರದಿಂದ ಕೊಳವೆ ಮೂಲಕ ತಂದು, ಸ್ಥಾವರದ ತ್ಯಾಜ್ಯವನ್ನು ಕೊಳವೆ ಮೂಲಕವೇ ಸಮುದ್ರಕ್ಕೆ ಬಿಡಲಾಗುತ್ತಿದೆ.

ಈ ಮಾರ್ಗದಲ್ಲಿ ಹಲವು ಬಾರಿ ಅವಾಂತರ ಸೃಷ್ಟಿಯಾಗಿತ್ತು. ಪೈಪ್ಲೈನ್ ಒಡೆದು ತ್ಯಾಜ್ಯಗಳು ಕೃಷಿಭೂಮಿ, ಕುಡಿಯುವ ನೀರು ಕಲುಷಿತಗೊಂಡಿದ್ದವು. ಅಲ್ಲದೇ ಘಟಕದ ತ್ಯಾಜ್ಯ ಸಮುದ್ರಕ್ಕೆ ಸೇರಿಕೊಂಡು ಜಲಚರಗಳಿಗೂ ತೊಂದರೆಗಳಾಗಿವೆ. ವೈಜ್ಞಾನಿಕ ವಿಧಾನ ಅನುಸರಿಸಿಯೇ ಇಲ್ಲ ಎಂದು ಕಿಡಿಕಾರುತ್ತಾರೆ ಸ್ಥಳೀಯರು. ‘ಹುಟ್ಟಿದ ಊರು, ಬಿಡಲಿಕ್ಕೂ ಆಗದು, ಹಾರುಬೂದಿ ಸಮಸ್ಯೆಯಿಂದಾಗಿ ಇರಲಿಕ್ಕೂ ಆಗದು. ಬದುಕು ದುರ್ಬರ ಎನಿಸಿದೆ’ ಎಂದು ಸ್ಥಳೀಯ ನಿವಾಸಿಗಳು ಅಲವತ್ತುಕೊಂಡಿದ್ದಾರೆ. 600 ಮೆ.ವಾ. ವಿದ್ಯುತ್ ಉತ್ಪಾದನೆಯ ಆರಂಭದಲ್ಲಿಯೇ ಇಷ್ಟು ಸಮಸ್ಯೆ ಕಾಣಿಸಿಕೊಂಡರೆ ಮುಂದಿನ ಹಂತಗಳಲ್ಲಿ ಹೇಗೆ ಎನ್ನುವುದು ಸ್ಥಳೀಯರ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.