ಹಾವೇರಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ನಿಗದಿಯ ಗೊಂದಲ ಮುಂದುವರಿದಿದ್ದು, ಜಿಲ್ಲೆಯಲ್ಲಿ ಚಟುವಟಿಕೆಗಳು ಮತ್ತೆ ಚಿಗುರೊಡೆದಿವೆ.

‘ಹಾವೇರಿ ಜಿಲ್ಲೆಯಲ್ಲೇ ಈ ಬಾರಿ ಸಮ್ಮೇಳನ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಮತ್ತೊಮ್ಮೆ ಘೋಷಿಸುವ ಮೂಲಕ ಗೊಂದಲ ಜೀವಂತವಾಗಿ ಉಳಿದಿದೆ. ಇನ್ನೊಂದೆಡೆ ಜಿಲ್ಲೆಯ ಸಾಹಿತ್ಯಾಭಿಮಾನಿಗಳ ಆಶಯಕ್ಕೆ ಮರುಜೀವ ಸಿಕ್ಕಿದೆ.

ಸ್ಥಳ ನಿರ್ಣಯಿಸುವ ಬಗ್ಗೆ ಹಾವೇರಿ ಮತ್ತು ರಾಣೆಬೆನ್ನೂರು ತಾಲ್ಲೂಕು ಕೇಂದ್ರದ ಮಧ್ಯ ಸ್ಥಳವಾದ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನಲ್ಲಿ ಇದೇ 26ರಂದು ಸಭೆ ಕರೆಯಲಾಗಿದೆ. ಇಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.