ಮೈಸೂರು: ರಾಮಾಯಣ, ಮಹಾಭಾರತದಂಥ ಕೃತಿಗಳನ್ನು ನಿಂದಿಸುವುದು, ಸುಟ್ಟು ಹಾಕಿ ಎಂದು ಹೇಳುವುದು ವಿಕೃತ ಮನಸ್ಸಿನವರಷ್ಟೇ ಹೇಳಬಹುದಾದ ಮಾತು ಎಂದು ಸಾಹಿತಿ ಮಳಲಿ ವಸಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸಂವಹನ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಲ್ಲಿನ ಕಲಾಮಂದಿರದ ಮನೆಯಂಗಳದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಹುಣಸೂರು ಎಸ್. ರಾಘವೇಂದ್ರರಾವ್ ಅವರು ಇಂಗ್ಲಿಷಿನಿಂದ ಅನುವಾದಿಸಿರುವ ‘ಮಹಾಭಾರತದ ಕಥೆಗಳು’ ಹಾಗೂ ಪ್ರೊ.ಎಚ್. ಸಿದ್ದಲಿಂಗಯ್ಯ ಅವರ ‘ಲಕ್ಷ್ಮೀಶನ ವಚನ ಜೈಮಿನಿ ಭಾರತ’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಅತ್ಯಂತ ದುಷ್ಟ ಎಂದೇ ಪರಿಗಣಿತನಾದ ದುರ್ಯೋಧನನಲ್ಲಿ ಉದಾತ್ತ ಗುಣಗಳನ್ನು ಪಂಪ ಹಾಗೂ ಕುವೆಂಪು ಅವರಂತಹ ಮಹಾಕವಿಗಳು ಅರಸಿದರು. ಆದರೆ, ಈಗ ಕೆಲವರು ಪುಸ್ತಕಗಳನ್ನು ಸುಟ್ಟು ಬಿಡಿ ಅನ್ನುತ್ತಾರೆ. ಇದು ಸುಕೃತ ಮನಸ್ಸಿನವರು ಮಾಡುವ ಕೆಲಸ ಅಲ್ಲ ಎಂದು ಅವರು ವಿಶ್ಲೇಷಿಸಿದರು.

ರಾಮಾಯಣ, ಮಹಾಭಾರತಗಳು ವಿಕಾಸದ ಗ್ರಂಥಗಳು ಮಾತ್ರವಲ್ಲ, ವಿಕಸನದ ಗ್ರಂಥಗಳೂ ಹೌದು. ಇವುಗಳಲ್ಲಿ ಜೀವನ ಮೌಲ್ಯಗಳು ಉಸಿರಾಡುತ್ತಿವೆ. ಮಕ್ಕಳಿಗೆ ಇದರ ಕಥೆಗಳನ್ನು ಹೇಳುವುದರಿಂದ ಅವರ ವ್ಯಕ್ತಿತ್ವ ಸನ್ನಡತೆಯತ್ತ ಸಾಗುತ್ತದೆ ಎಂಬುದಕ್ಕೆ ಮಹಾರಾಜ ಶಿವಾಜಿ ಒಳ್ಳೆಯ ಉದಾಹರಣೆ ಎಂದರು.

ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಹಾರಾಜ್, ನಿವೃತ್ತ ಪ್ರಾಧ್ಯಾಪಕ ಶಿವಾಜಿ ಜೋಯಿಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಚಂದ್ರಶೇಖರ್ ಹಾಗೂ ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್. ಲೋಕಪ್ಪ ಹಾಜರಿದ್ದರು.

ವಿದ್ವತ್ ಇಲ್ಲದವರಿಂದ ಮಹಾಕಾವ್ಯ!: ಇಂದು ವಿದ್ವತ್ ಇಲ್ಲದವರು ಮಹಾಕಾವ್ಯ ಬರೆದು ಪ್ರಶಸ್ತಿಗಾಗಿ ಲಾಬಿ ಮಾಡುತ್ತಿದ್ದಾರೆ. ಇದು ಕನ್ನಡಕ್ಕೆ ಬಂದ ಕಂಟಕ’ ಎಂದು ಮಳಲಿ ಕಿಡಿಕಾರಿದರು.

ಕೆಲವರಂತೂ ಹಣ ಕೊಟ್ಟು ಬೇರೆಯವರಿಂದ ಕೃತಿಗಳನ್ನು ಬರೆಯಿಸಿ ಪ್ರಶಸ್ತಿಗಾಗಿ ವಿಧಾನಸೌಧ ಸುತ್ತುತ್ತಿದ್ದಾರೆ. ಇದರಿಂದ ಪ್ರಶಸ್ತಿಗಳಿಗೆ ಮನ್ನಣೆ ಇಲ್ಲದಂತಾಗಿದೆ. ನೈಜ ಕೃತಿಕಾರರಿಗೂ ಗೌರವ ತಪ್ಪಿದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.