ಬೆಂಗಳೂರು: ಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹಗುರ ಯುದ್ಧ ವಿಮಾನ ‘ತೇಜಸ್’ನ ಎರಡನೇ ಹಂತದ ಪರೀಕ್ಷಾರ್ಥ ಹಾರಾಟ ಶುಕ್ರವಾರ ಇಲ್ಲಿ ಯಶಸ್ಸಿಯಾಗಿ ನಡೆಯಿತು. ನಂತರ ಇದನ್ನು ಹೆಚ್ಚಿನ ಪರೀಕ್ಷೆಗಾಗಿ ವಾಯುಪಡೆಗೆ ಹಸ್ತಾಂತರಿಸಲಾಯಿತು.

ಈ ಮೂಲಕ ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿ ದೇಶ ಮತ್ತೊಂದು ಮೈಲಿಗಲ್ಲು ಸಾಧಿಸಿದಂತಾಗಿದೆ. 4ನೇ ಪೀಳಿಗೆಯ ಹಗುರ ಯುದ್ಧ ವಿಮಾನ ತಯಾರಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ.

ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಡೆದ ‘ತೇಜಸ್’ ಹಾರಾಟಕ್ಕೆ ರಕ್ಷಣಾ ಸಚಿವ ಎ.ಕೆ. ಆಂಟನಿ, ವಾಯುಪಡೆ ಮುಖ್ಯಸ್ಥ ಎನ್.ಎ.ಕೆ. ಬ್ರೌನ್, ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಎ) ನಿರ್ದೇಶಕ ಪಿ.ಎಸ್. ಸುಬ್ರಮಣಿಯನ್, ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಅವಿನಾಶ್ ಚಂದರ್, ಎಚ್‌ಎಎಲ್ ಅಧ್ಯಕ್ಷ ಡಾ.ಆರ್. ಕೆ. ತ್ಯಾಗಿ, ರಕ್ಷಣಾ ಉತ್ಪನ್ನಗಳ ಇಲಾಖೆಯ ಕಾರ್ಯದರ್ಶಿ ಜಿ.ಸಿ. ಪತಿ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾದರು.

1983ರಲ್ಲಿ ಸ್ವದೇಶಿ ಲಘು ಯುದ್ಧ ವಿಮಾನ ತಯಾರಿಸುವುದನ್ನು ಆರಂಭಿಸಿದ ಭಾರತ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ತಂತ್ರಜ್ಞರ ಸತತ ಪರಿಶ್ರಮದ ನಂತರ 2011ರ ಜನವರಿ 10ರಂದು ‘ತೇಜಸ್’ಗೆ ಮೊದಲ ಹಾರಾಟ ಅನು ಮತಿ ದೊರೆಯಿತು. ಈಗಿನದು ಎರಡನೇ ಹಾರಾಟ ಅನುಮತಿ (ಐಒಸಿ). ಇತ್ತೀಚೆಗಷ್ಟೇ ಇತಿಹಾಸದ ಪುಟಗಳಿಗೆ ಸೇರಿರುವ ‘ಮಿಗ್ 21’ ಯುದ್ಧ ವಿಮಾನಕ್ಕೆ ‘ತೇಜಸ್‘ ಪರ್ಯಾಯವಾಗಲಿದೆ.

ಎಚ್‌ಎಎಲ್ ಸಹಭಾಗಿತ್ವದಲ್ಲಿ ವೈಮಾನಿಕ ಅಭಿವೃದ್ಧಿ ಸಂಸ್ಥೆ ಈ ವಿಮಾನ ಅಭಿವೃದ್ಧಿಪಡಿಸಿದೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಕೇಂದ್ರೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ (ಸಿಎಸ್‌ಐಆರ್), ವಾಯು ಪಡೆ ಸೇರಿದಂತೆ ಹಲವು ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಈ ಕಾರ್ಯದಲ್ಲಿ ಪಾಲ್ಗೊಂಡಿವೆ.

ಪುಟ್ಟ ಗಾತ್ರದ ‘ತೇಜಸ್’ ಅತಿ ಹಗುರ, ಒಂದೇ ಎಂಜಿನ್ ಮತ್ತು ಒಂದೇ ಆಸನ ಹೊಂದಿದ್ದು ಅತ್ಯುತ್ತಮ ಸೂಪರ್‌ಸಾನಿಕ್ (ಶಬ್ದಾತೀತ ವೇಗದ) ಯುದ್ಧ ವಿಮಾನ. ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೊದಲ ಹಾರಾಟದ ಅನುಮತಿ ಪಡೆಯುವ ಸಂದರ್ಭದಲ್ಲಿ ಇದು ಕೆಲವು ಕೊರತೆಗಳನ್ನು ಎದುರಿಸಿತ್ತು. ಅವನ್ನೆಲ್ಲ ಸರಿಪಡಿಸಿ ನಿಖರ ಗುರಿ ಮತ್ತು ಎಲ್ಲ ಬಗೆಯ ಹವಾಮಾನದಲ್ಲೂ ಬಳಕೆಯಾಗುವಂತೆ ಅಭಿವೃದ್ಧಿಪಡಿಸಲಾಗಿದೆ.

ಎರಡನೇ ಹಂತದ ಪರೀಕ್ಷೆಗೆ ಮುನ್ನ ಇದು 2450 ಬಾರಿ ಹಾರಾಟ ನಡೆಸಿದೆ. ಎರಡನೇ ಪರೀಕ್ಷೆಯಲ್ಲಿ ವಿವಿಧ ಬಗೆಯ ಶಸ್ತ್ರಾಸ್ತ್ರ ಪ್ರಯೋ ಗಗಳನ್ನು ಸಹ ಪ್ರದರ್ಶಿಸಿದೆ. ಲೇಸರ್ ನಿರ್ದೇಶಿತ ವಿಧಾನದಲ್ಲಿ ಬಾಂಬ್ ಹಾಕುವುದು ಮತ್ತು ದಾಳಿ ನಡೆಸುವ ಪ್ರಯೋಗಗಳನ್ನು ಸಹ ಕೈಗೊಳ್ಳಲಾಗಿದೆ.
ಈ ವಿಮಾನ ಒಂದು ತಾಸಿಗೆ ೧3೫೦ ಕಿ.ಮೀ ವೇಗದೊಂದಿಗೆ 3 ಸಾವಿರ ಕೆ.ಜಿ. ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು. 1700 ಕಿ.ಮೀ ದೂರ ಕ್ರಮಿಸಬಲ್ಲದು. ಅಮೆರಿಕದ ಜನರಲ್ ಎಲೆಕ್ಟ್ರಿಕ್ ಏರ್‌ಕ್ರಾಫ್ಟ್ ಎಂಜಿನ್ಸ್‌ನ ಎಂಜಿನ್‌ಗಳನ್ನು ಇದರಲ್ಲಿ ಬಳಸಿದ್ದು, ಎಚ್‌ಎಎಲ್‌ನಲ್ಲಿ ಉತ್ಪಾದಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

2014ರಿಂದ ವಾಯುಪಡೆ ಸೇವೆಗೆ ಲಭ್ಯವಾಗಲಿದೆ. ‘ಸದ್ಯಕ್ಕೆ ಪ್ರತಿ ವರ್ಷ ಎಂಟು ಯುದ್ಧ ವಿಮಾನಗಳನ್ನು ತಯಾರಿಸುವ ಉದ್ದೇಶ ವಿದೆ. ಮುಂದೆ ಇದನ್ನು ವರ್ಷಕ್ಕೆ 16ಕ್ಕೆ ಹೆಚ್ಚಿಸಲಾ ಗುವುದು’ ಎಂದು ಎಚ್‌ಎಎಲ್ ಅಧ್ಯಕ್ಷ ಡಾ.ಆರ್. ಕೆ. ತ್ಯಾಗಿ ತಿಳಿಸಿದರು.

‘ತೇಜಸ್’ ವಿಶೇಷ
ರಾತ್ರಿಯಲ್ಲಿ ಮತ್ತು ಎಲ್ಲ ಋತುಗಳಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ

3500 ಕೆಜಿ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಲ್ಲದು

ಪ್ರತಿ ಗಂಟೆಗೆ 1350 ಕಿ.ಮೀ ವೇಗ

ಮಲ್ಟಿಮೋಡ್ ರಾಡಾರ್ ವ್ಯವಸ್ಥೆ

ಕಂಪ್ಯೂಟರ್ ಆಧಾರಿತ ನಿಯಂತ್ರಣ ಮತ್ತು ಉಸ್ತುವಾರಿ ವ್ಯವಸ್ಥೆ

ಅತ್ಯಾಧುನಿಕ ಗ್ಲಾಸ್ ಕಾಕ್‌ಪಿಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.