ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ‘ಹೊನ್ನ ಕೋಗಿಲೆ ಯೋಜನೆ’ಯಡಿ ಪ್ರಕಟಿಸಿರುವ ದಲಿತ ಪ್ರಜ್ಞೆಯ ‘ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ’ ಆರು ಸಂಪುಟಗಳು ಹಾಗೂ ‘ಕನ್ನಡ ವಿಶ್ವಕೋಶದ ಪರಿಷ್ಕೃತ (3,5 ಮತ್ತು 7) ಸಂಪುಟಗಳು’ ಏಪ್ರಿಲ್ 4 ರಂದು ಬಿಡುಗಡೆಯಾಗಲಿವೆ ಎಂದು ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನಸಗಂಗೋತ್ರಿಯ ಕ್ರಾಫರ್ಡ್ ಭವನದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಚಿವರಾದ ವಿ. ಶ್ರೀನಿವಾಸಪ್ರಸಾದ್ ಮತ್ತು ಉಮಾಶ್ರೀ ಗ್ರಂಥಗಳನ್ನು ಬಿಡುಗಡೆಗೊಳಿಸುವರು. ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಸಂಪುಟಗಳ ಕುರಿತು ಮಾತನಾಡುವರು ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರವು ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕಲ್ಪಿಸಿದ್ದರಿಂದ ರಾಜ್ಯ ಸರ್ಕಾರವು ಭಾಷಾಭಿವೃದ್ಧಿ ಯೋಜನೆಯಡಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ₹ 1 ಕೋಟಿ ಅನುದಾನ ಒದಗಿಸಿತ್ತು. ಇದರಲ್ಲಿ ₹ 22 ಲಕ್ಷ ವೆಚ್ಚದಲ್ಲಿ ‘ಹೊನ್ನ ಕೋಗಿಲೆ ಯೋಜನೆ’ ಕೈಗೆತ್ತಿಕೊಳ್ಳಲಾಗಿತ್ತು. ‘ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ’ ಸಂಪುಟಗಳ ಪ್ರಧಾನ ಸಂಪಾದಕ ಪ್ರೊ.ಅರವಿಂದ ಮಾಲಗತ್ತಿ ಹಾಗೂ ಗೌರವ ಸಂಪಾದಕರಾಗಿ ಪ್ರೊ.ನೀಲಗಿರಿ ತಳವಾರ ಕಾರ್ಯನಿರ್ವಹಿಸಿದ್ದಾರೆ ಎಂದರು.

ಬಿಡುಗಡೆ ದಿನದಂದು ಸಂಪುಟಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ₹ 3,820 ಮುಖಬೆಲೆಯ ಸಾಹಿತ್ಯ ಚರಿತ್ರೆಯ ಆರು ಸಂಪುಟಗಳನ್ನು ₹ 2,500ಕ್ಕೆ ಮತ್ತು ₹ 650 ಮುಖಬೆಲೆಯ (ಒಂದು ಪ್ರತಿಗೆ) ವಿಶ್ವಕೋಶವನ್ನು ₹ 500ಕ್ಕೆ ಖರೀದಿಸಬಹುದು ಎಂದು ತಿಳಿಸಿದರು.

ಪ್ರಧಾನ ಸಂಪಾದಕ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ಎರಡು ವರ್ಷಗಳ ನಿಗದಿತ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಈ ಅವಧಿಯಲ್ಲಿ 1,600 ವರ್ಷಗಳ ಕನ್ನಡ ಸಾಹಿತ್ಯವನ್ನು ಪುನರ್ಮೌಲ್ಯೀಕರಣ ಮಾಡಿದ್ದೇವೆ. ಈಗಾಗಲೇ ಪ್ರಕಟವಾಗಿರುವ ಸಾಹಿತ್ಯ ಚರಿತ್ರೆಗಳಿಗಿಂತ ಭಿನ್ನವಾಗಿ ಈ ಸಂಪುಟಗಳನ್ನು ರೂಪಿಸಿದ್ದೇವೆ ಎಂದು ವಿಶ್ಲೇಷಿಸಿದರು.

ತಳಸಮುದಾಯಗಳಿಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿನ ಅಂಶಗಳನ್ನು ದಾಖಲಿಸಿದ್ದೇವೆ. ಶಾಸನ, ಜಾನಪದ, ಹಳಗನ್ನಡ, ನಡುಗನ್ನಡ, ಹೊಸಗನ್ನಡದ ಕಾವ್ಯ, ಕಾದಂಬರಿ, ನಾಟಕ, ಆತ್ಮಕತೆ, ಸಂಶೋಧನೆ, ವಿಮರ್ಶೆ ಸೇರಿದಂತೆ ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಕಟ್ಟಿಕೊಟ್ಟಿದ್ದೇವೆ. ತಳಸಮುದಾಯಗಳಿಗೆ ಸಂಬಂಧಿಸಿದಂತೆ ಭಾರತೀಯ ಸಾಹಿತ್ಯದಲ್ಲಿ ಮೂಡಿಬಂದಿರುವ ಮೊದಲ ಸಾಹಿತ್ಯ ಚರಿತ್ರೆ ಇದು ಎಂದು ವಿವರಿಸಿದರು.

ಈ ಸಾಹಿತ್ಯ ಚರಿತ್ರೆಯ ಪ್ರತಿ ಸಂಪುಟವು 850 ರಿಂದ 950 ಪುಟ ಒಳಗೊಂಡಿದೆ. ಒಟ್ಟು 15 ಸಂಪಾದಕರು ಈ ಆರು ಸಂಪುಟಗಳನ್ನು ರಚಿಸಿದ್ದಾರೆ. ಸುಮಾರು 1,112 ಸಾಹಿತಿಗಳ ಕೃತಿಗಳನ್ನು ಮರುಮೌಲ್ಯಮಾಪನಕ್ಕೆ ಒಳಪಡಿಸಿದ್ದೇವೆ. ದಲಿತ ಚಳವಳಿಗೆ ಸಂಬಂಧಿಸಿದಂತೆ 300 ಪ್ರಕರಣಗಳನ್ನು ದಾಖಲಿಸಿದ್ದೇವೆ. ವಿಶ್ವಕೋಶದ 15 ಸಂಪುಟಗಳ ಪರಿಷ್ಕರಣೆ ಕೈಗೆತ್ತಿಕೊಳ್ಳಲಾಗಿದೆ. 3, 5 ಮತ್ತು 7 ನೇ ಸಂಪುಟಗಳಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದರು.

ಡಾ.ಡಿ.ಎನ್. ನಾಗರತ್ನ ಸಂಪಾದಿಸಿರುವ ‘ಶ್ರೀಕನಕದಾಸರ ಕೀರ್ತನೆಗಳು’, ಬಿ.ಎಸ್. ಸಣ್ಣಯ್ಯ ಮತ್ತು ಬಿ.ಎಂ. ಗೀತಾ ಸಂಪಾದಿಸಿರುವ ‘ಸಕಲ ವೈದ್ಯಸಂಹಿತಾ ಸಾರಾರ್ಣವ’ ಹಾಗೂ ಡಾ.ನೀಲಗಿರಿ ತಳವಾರ ಸಂಪಾದಿಸಿರುವ ‘ನಿಧಿ–ನಿಕ್ಷೇಪ’ ಕೃತಿಗಳು ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.