ಶಾಂಘೈ: ಚೀನಾದ ದಕ್ಷಿಣ ಭಾಗದಲ್ಲಿ ಸೋಮವಾರ ಏಕಾಏಕಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಗುವಾಂಗ್‌ಜೌ ನಗರದಲ್ಲಿ ಭಾನುವಾರ 18 ಹೊಸ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಗುವಾಂಗ್‌ಜೌನಲ್ಲಿ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಚೀನಾದಲ್ಲಿ 27 ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 18 ಪ್ರಕರಣಗಳು ಗುವಾಂಗ್‌ಜೌ ಮತ್ತು ಎರಡು ಪ್ರಕರಣಗಳು ಫೋಶನ್ ನಗರದಲ್ಲಿ ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ತಿಳಿಸಿದೆ. ಗ್ವಾಂಗ್‌ಡಂಗ್ ಪ್ರಾಂತ್ಯದಲ್ಲಿ ಈ ನಗರವಿದ್ದು, ಇದು ಹಾಂಕಾಂಗ್ ಸಮೀಪ ಇದೆ.

ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 11.40ರಿಂದ ಈವರೆಗೆ ಗುವಾಂಗ್‌ಜೌ ಬೈಯುನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 519 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಇದರ ಬೆನ್ನಲ್ಲೇ ಸರ್ಕಾರವು ಗುವಾಂಗ್‌ಜೌ ನಗರದಲ್ಲಿ ಪ್ರಯಾಣ ನಿರ್ಬಂಧ ಹೇರಿದೆ. ವಿಮಾನ, ರೈಲು, ಬಸ್ ಅಥವಾ ಖಾಸಗಿ ವಾಹನಗಳ ಮೂಲಕ ಗುವಾಂಗ್‌ಜೌ ನಗರದಿಂದ ಬೇರೆಯಡೆಗೆ ಪ್ರಯಣಿಸುವವರು ಕಡ್ಡಾಯವಾಗಿ 72 ಗಂಟೆಗಳೊಗಿನ ನೆಗೆಟಿವ್ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಗುವಾಂಗ್‌ಜೌ ನಗರದ ನಿವಾಸಿಗಳು ಮನೆಯಿಂದ ಹೊರ ಬರದಂತೆ ಸ್ಥಳೀಯ ಸರ್ಕಾರ ಹೇಳಿದೆ. ಅಲ್ಲದೆ ಮಾರುಕಟ್ಟೆ, ಮನರಂಜನಾ ತಾಣಗಳನ್ನು ಮುಚ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.