ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ಮುಚ್ಚಿಕೊಂಡು 45.72 ಸೆಕೆಂಡ್‌ಗಳಲ್ಲಿ ಚೆಸ್‌ ಬೋರ್ಡ್‌ ಜೋಡಿಸಿದ ಬಾಲಕಿ

Published 27 ಸೆಪ್ಟೆಂಬರ್ 2023, 10:00 IST
Last Updated 27 ಸೆಪ್ಟೆಂಬರ್ 2023, 10:00 IST
ಅಕ್ಷರ ಗಾತ್ರ

ಮಲೇಷಿಯಾ: 10 ವರ್ಷದ ಬಾಲಕಿಯೊಬ್ಬರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 45.72 ಸೆಕೆಂಡ್‌ಗಳಲ್ಲಿ ಚೆಸ್‌ ಬೋರ್ಡ್‌ ಜೋಡಿಸಿ ಗಿನ್ನೀಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಮಲೇಷಿಯಾ ಮೂಲದ ಪುನೀತಾ ಮಲರ್‌ ರಾಜ್‌ಶೇಖರ್‌ ಈ ಸಾಧನೆ ಮಾಡಿದ್ದಾರೆ. ಗಿನ್ನೀಸ್ ವಿಶ್ವ ದಾಖಲೆ ಸಂಸ್ಥೆಯು ‘ಕಣ್ಣುಮುಚ್ಚಿ ವೇಗವಾಗಿ ಚೆಸ್‌ ಬೋರ್ಡ್‌ ಜೋಡಿಸಿದ ಬಾಲಕಿ’ ಎನ್ನುವ ಪ್ರಶಸ್ತಿಯನ್ನು ನೀಡಿದೆ. 

ಪ್ರಶಸ್ತಿ ಪಡೆಯುವ ವೇಳೆ ‘ನನ್ನ ತಂದೆಯೇ ನನಗೆ ತರಬೇತಿ ನೀಡಿದವರು, ಪ್ರತಿದಿನ ನಾವಿಬ್ಬರೂ ಚೆಸ್‌ ಆಡುತ್ತಿದ್ದೆವು ಎಂದು ಹೇಳಿದ್ದಾರೆ.

ಶಾಲೆಯ ಆವರಣದಲ್ಲಿ ಈ ಸಾಧನೆ ನಡೆದಿದ್ದು, ಇದಕ್ಕೆ ಪಾಲಕರು ಹಾಗೂ ಶಿಕ್ಷಕರ ಸಂಘದ ಸದಸ್ಯರು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ಸಾಕ್ಷಿಯಾಗಿದ್ದಾರೆ.

‘ನನಗೆ ಆಸಕ್ತಿ ಇರುವ ವಿಷಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಆಸೆಯಿದೆ. ಗಣಿತ ನನ್ನ ಇಷ್ಟದ ವಿಷಯ, ಭವಿಷ್ಯದಲ್ಲಿ ಬಾಹ್ಯಾಕಾಶ ವಿಜ್ಞಾನಿಯಾಗುವಾಸೆ’ ಎಂದು ಪುನೀತಾ ಮಲರ್‌ ಹೇಳಿದ್ದಾರೆ. 

ಪುನೀತಾ ಮಲರ್‌ 2022-2023 ರ ಏಷ್ಯಾದ ಅತ್ಯುತ್ತಮ ಮಕ್ಕಳ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಮಲೇಷ್ಯಾದ ಕಿಡ್ಸ್ ಗಾಟ್ ಟ್ಯಾಲೆಂಟ್‌ನಂತಹ ವಿವಿಧ ಸ್ಪರ್ಧೆಗಳಲ್ಲಿ ತನ್ನ ಕೌಶಲ್ಯಗಳನ್ನು ಪ್ರದರ್ಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT