ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಗುರು ‘ಮಣ್ಣು ಉಳಿಸಿ’ ಅಭಿಯಾನದ ಪ್ರೇರಣೆ: ದ.ಆಫ್ರಿಕಾದಲ್ಲಿ 10 ಸಾವಿರ ಕಿ.ಮೀ ನಡಿಗೆ

Published 26 ಮೇ 2023, 19:47 IST
Last Updated 26 ಮೇ 2023, 19:47 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರ ‘ಮಣ್ಣು ಉಳಿಸಿ’ ಅಭಿಯಾನದ ಪ್ರೇರಣೆಯಿಂದ ದಕ್ಷಿಣ ಆಫ್ರಿಕಾದಲ್ಲಿ 10 ಸಾವಿರ ಕಿ.ಮೀ ನಡಿಗೆ ಕೈಗೊಂಡಿರುವ ಸಾಧಕ ಇಲ್ಲಿನ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಜೂನ್‌ 26ರಂದು ಆಯೋಜಿಸಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಮುಖ್ಯ ಅತಿಥಿಯಾಗಿದ್ದು, ಈ ಸಮಾರಂಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದೆ.

‘ಸದ್ಗುರು ಲಂಡನ್‌ನಿಂದ ಭಾರತಕ್ಕೆ ಮೋಟಾರ್ ಬೈಕ್‌ನಲ್ಲಿ ಜಾಥಾ ನಡೆಸಿದ್ದನ್ನು ನೋಡಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ನೆಲೆಸಿರುವ ಡಲ್‌ಸ್ಟ್ರೂಮ್‌ನಿಂದ ದಕ್ಷಿಣ ಆಫ್ರಿಕಾದಾದ್ಯಂತ 10 ಸಾವಿರ ಕಿ.ಮೀ. ನಡಿಗೆ ಕೈಗೊಂಡೆ. ಎಲ್ಲಿ ನಾನು ಬದುಕುತ್ತೇನೋ ಅಲ್ಲಿ ಮಣ್ಣು ಉಳಿಸಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತೇನೆ’ ಎಂದು ‘ಮಣ್ಣು ಉಳಿಸಿ’ ರಾಯಭಾರಿ ಟೆಸ್ಕೆ ನಾಕಾಡಿಮೆಂಗ್ ಹೇಳಿದ್ದಾರೆ. ಈ ನಡಿಗೆಯನ್ನು ಅವರು ಒಂಬತ್ತು ತಿಂಗಳ ಕಾಲ ನಡೆಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT