ಟೋಕಿಯೊ (ಎಪಿ): ಜಪಾನಿನ 107 ವರ್ಷ ಮತ್ತು 330 ದಿನಗಳ ವಯಸ್ಸಿನ ಇಬ್ಬರು ಸಹೋದರಿಯರು ವಿಶ್ವದ ಅತ್ಯಂತ ಹಿರಿಯ ಅವಳಿ ಜೀವಗಳೆಂದು ಗಿನ್ನೆಸ್ ವಿಶ್ವ ದಾಖಲೆಗಳಿಂದ ಪ್ರಮಾಣೀಕರಿಸಲ್ಪಟ್ಟಿದ್ದಾರೆ ಎಂದು ಸಂಸ್ಥೆ ಸೋಮವಾರ ತಿಳಿಸಿದೆ.

ಜಪಾನಿನ ರಾಷ್ಟ್ರೀಯ ರಜಾ ದಿನವಾದ ವೃದ್ಧರ ದಿನಾಚರಣೆಯಂದು ಈ ಘೋಷಣೆ ಹೊರಬಿದ್ದಿದೆ.

ಸಹೋದರಿಯರಾದ ಉಮೆನೊ ಸುಮಿಯಮಾ ಮತ್ತು ಕೌಮೆ ಕೊಡಮಾ ಅವರು 1913ರನವೆಂಬರ್ 5ರಂದು ಪಶ್ಚಿಮ ಜಪಾನ್‌ನ ಶೋಡೋಶಿಮಾ ದ್ವೀಪದಲ್ಲಿ ಜನಿಸಿದವರು. 11 ಮಂದಿ ಒಡಹುಟ್ಟಿದವರಲ್ಲಿ ಈ ಅವಳಿಗಳು ಮೂರನೆಯ ಮತ್ತು ನಾಲ್ಕನೆಯವರಾಗಿ ಜನ್ಮತಾಳಿದವರು.

ಜಪಾನಿನ ಪ್ರಸಿದ್ಧ ಅವಳಿ ಸಹೋದರಿಯರಾದ ಕಿನ್ ನರಿಟಾ ಮತ್ತು ಜಿನ್ ಕಾನಿ (107 ವರ್ಷಗಳು ಮತ್ತು 175 ದಿನಗಳು) ಅವರ ಹೆಸರಿನಲ್ಲಿ ಇದೇ ಸೆಪ್ಟೆಂಬರ್ 1ರವರೆಗೆ ಇದ್ದ ದಾಖಲೆಯನ್ನು ಮುರಿದಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಿದೆ.

12.50 ಕೋಟಿ ಜನಸಂಖ್ಯೆ ಇರುವ ಜಪಾನ್ ವಿಶ್ವದಲ್ಲಿ ಅತ್ಯಂತ ವೇಗವಾಗಿ ವಯಸ್ಸಾದ ಜನಸಂಖ್ಯೆ ಹೊಂದುತ್ತಿರುವ ರಾಷ್ಟ್ರವಾಗಿದೆ. ಈ ದೇಶದ ಜನಸಂಖ್ಯೆಯ ಶೇ 29ರಷ್ಟು ಜನರು 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು. ಇವರಲ್ಲಿ ಸುಮಾರು 86,510 ಮಂದಿ ಶತಾಯುಷಿಗಳಾಗಿದ್ದು, ಇವರಲ್ಲಿ ಅರ್ಧದಷ್ಟು ಜನರಿಗೆ ಈ ವರ್ಷ 100 ವರ್ಷ ತುಂಬಿದೆ ಎಂದಿದೆ ಆರೋಗ್ಯ ಮತ್ತು ಕಲ್ಯಾಣ ಸಚಿವಾಲಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.