ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಹೋರ್‌ | ಪಾಕಿಸ್ತಾನ ಭದ್ರತಾ ಪಡೆಯಿಂದ ಇಬ್ಬರು ಭಯೋತ್ಪಾದಕರ ಹತ್ಯೆ

Published 1 ಅಕ್ಟೋಬರ್ 2023, 16:54 IST
Last Updated 1 ಅಕ್ಟೋಬರ್ 2023, 16:54 IST
ಅಕ್ಷರ ಗಾತ್ರ

ಲಾಹೋರ್‌: ಪಂಜಾಬ್‌ ಪ್ರಾಂತ್ಯದ ಪೊಲೀಸ್‌ ಗಸ್ತು ಠಾಣೆಯೊಂದರ ಮೇಲೆ ತೆಹ್ರೀಕ್‌–ಇ–ತಾಲಿಬಾನ್‌ ಪಾಕಿಸ್ತಾನ್ ಸಂಘಟನೆಯು ನಡೆಸಿದ ದಾಳಿಯನ್ನು ವಿಫಲಗೊಳಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನದ ಭದ್ರತಾ ಪಡೆಗಳು ಭಾನುವಾರ ತಿಳಿಸಿವೆ.

ಮಿಯಾನ್‌ವಾಲಿಯ ಕುಂಡಲ್ ಗಸ್ತು ಠಾಣೆಯ ಮೇಲೆ ಭಾನುವಾರ ನಸುಕಿನಲ್ಲಿ ಉಗ್ರ ಸಂಘಟನೆ ದಾಳಿ ನಡೆಸಿದ್ದು, ಭದ್ರತೆಯಲ್ಲಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪಂಜಾಬ್ ಪೊಲೀಸ್ ಮುಖ್ಯಸ್ಥ ಉಸ್ಮಾನ್‌ ಅನ್ವರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT