ಬೀಜಿಂಗ್: ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳು ಕಳೆದಿದ್ದ ಚೀನಾದ ಮೂವರು ಗಗನಯಾತ್ರಿಗಳು ಶೆಂಜೌ-15 ಗಗನ ನೌಕೆಯಲ್ಲಿ ಭಾನುವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಹ್ಯಾಕಾಶ ನಿಲ್ದಾಣದ ಕಾಮಗಾರಿಗಾಗಿ ತೆರಳಿದ್ದ ಗಗನಯಾತ್ರಿಗಳಾದ ಫೀ ಜುನ್ಲಾಂಗ್, ಡ್ಯಾಂಗ್ ಕ್ವಿಂಗ್ಮಿಂಗ್ ಮತ್ತು ಜಾಂಗ್ ಲು ಅವರಿದ್ದ ಗಗನ ನೌಕೆಯು ಡಾಂಗ್‌ಫೆಂಗ್ ನೆಲೆಯಲ್ಲಿ ಬಂದಿಳಿದಿದೆ ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್‌ಎ) ಹೇಳಿದೆ.
ಶೆಂಜೌ-15 ಮಾನವಸಹಿತ ಬಾಹ್ಯಾಕಾಶ ಯೋಜನೆಯು ಯಶಸ್ವಿಯಾಗಿದೆ ಎಂದೂ ಸಂಸ್ಥೆ ಘೋಷಿಸಿದೆ.
ಸಾಮಾನ್ಯ ಪ್ರಜೆ ಸೇರಿದಂತೆ ಮೂವರು ಗಗನಯಾತ್ರಿಗಳನ್ನು ಮೇ 30ರಂದು ಚೀನಾವು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿಕೊಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.