ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲ್ಡೀವ್ಸ್‌ನಿಂದ 43 ಮಂದಿ ಭಾರತೀಯರ ಗಡಿಪಾರು

Published : 14 ಫೆಬ್ರುವರಿ 2024, 14:46 IST
Last Updated : 14 ಫೆಬ್ರುವರಿ 2024, 14:46 IST
ಫಾಲೋ ಮಾಡಿ
Comments

ಮಾಲೆ (ಪಿಟಿಐ): ವೀಸಾ ನಿಯಮ ಉಲ್ಲಂಘನೆ, ಮಾದಕವಸ್ತು ಅಕ್ರಮ ಮಾರಾಟದಂಥ ಆರೋಪಗಳಿಗೆ ಸಂಬಂಧಿಸಿ 186 ವಿದೇಶಿಯರನ್ನು ಮಾಲ್ಡೀವ್ಸ್‌ ಗಡಿಪಾರು ಮಾಡಿದೆ. ಅವರಲ್ಲಿ 43 ಮಂದಿ ಭಾರತೀಯರಿದ್ದಾರೆ ಎಂದು ಅಲ್ಲಿಯ ಮಾಧ್ಯಮವೊಂದು ವರದಿ ಮಾಡಿದೆ.

ಗಡಿಪಾರಾದವರಲ್ಲಿ ಹೆಚ್ಚಿನವರು ಬಾಂಗ್ಲಾದೇಶೀಯರು (83 ಮಂದಿ). ನಂತರದ ಸ್ಥಾನದಲ್ಲಿ ಭಾರತ, ಶ್ರೀಲಂಕಾ (25), ನೇಪಾಳದ (8) ಪ್ರಜೆಗಳಿದ್ದಾರೆ. ಗಡಿಪಾರು ಮಾಡಿರುವ ದಿನಾಂಕ ಇನ್ನೂ ತಿಳಿದುಬಂದಿಲ್ಲ ಎಂದು ‘ಅಧಾಧು’ ಮಾಧ್ಯಮ ವರದಿ ಮಾಡಿದೆ.

ಈ ಕುರಿತು ಮಾಲ್ಡೀವ್ಸ್‌ನ ಆಂತರಿಕ ಭದ್ರತಾ ಸಚಿವ ಅಲಿ ಇಹುಸನ್‌ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ವಿವಿಧ ಹೆಸರುಗಳಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ವ್ಯಾಪಾರಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಭದ್ರತಾ ಸಚಿವಾಲಯ ಮತ್ತು ಅರ್ಥ ಸಚಿವಾಲಯ ಜಂಟಿಯಾಗಿ ಕೆಲಸ ಮಾಡುತ್ತಿವೆ ಎಂದರು.

ವಿದೇಶಿಗರು ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ಹಲವಾರು ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಸಮರ್ಪಕವಾದ ದಾಖಲೆಗಳು ಮತ್ತು ಪಾಸ್‌ಪೋರ್ಟ್‌ ಹೊಂದಿರುವ ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ಅಲ್ಲಿಯ ವಲಸೆ ನಿಯಂತ್ರಕ ಶಮಾನ್‌ ವಹೀದ್ ತಿಳಿಸಿದ್ದಾರೆ. 

ಅಕ್ರಮ ವ್ಯವಹಾರಗಳನ್ನು ಪತ್ತೆಮಾಡುವ ನಿಟ್ಟಿನಲ್ಲಿ ವಲಸೆ ನಿಯಂತ್ರಣ ವ್ಯವಸ್ಥೆ ಮತ್ತು ಪೊಲೀಸ್‌ ಇಲಾಖೆಯು ವಾರದಲ್ಲಿ ಎರಡರಿಂದ ಮೂರು ದಿವಸ ದಾಳಿಗಳನ್ನು ನಡೆಸುತ್ತಿವೆ. ಯಾವುದೇ ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಿ ಈ ದಾಳಿಗಳನ್ನು ನಡೆಸುತ್ತಿಲ್ಲ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT