ವಾಷಿಂಗ್ಟನ್ (ಪಿಟಿಐ): ಗರ್ಭ ಧರಿಸಿದ 20 ವಾರಗಳ ತರುವಾಯ (5 ತಿಂಗಳು) ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ನಿಷೇಧ ಹೇರುವ ಪ್ರಮುಖ ಮಸೂದೆಗೆ ರಿಪಬ್ಲಿಕನ್ ನಿಯಂತ್ರಣದ ಅಮೆರಿಕದ ಪ್ರತಿನಿಧಿಗಳ ಸಭೆ ಸಮ್ಮತಿ ನೀಡಿದೆ.

ಆದರೆ ಈ ಮಸೂದೆಗೆ ಸೆನೆಟ್ನಲ್ಲಿ ಬಹುಮತ ಹೊಂದಿರುವ ಡೆಮಾಕ್ರಟಿಕ್ ಪಕ್ಷ ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿರುವುದರಿಂದ ಮಸೂದೆ ಜಾರಿಗೆ ಬರುವುದು ಅನುಮಾನ ಎನ್ನಲಾಗಿದೆ. ಯಾವುದೇ ಮಸೂದೆ ಕಾನೂನು ರೂಪ ಪಡೆಯಲು ಅದು ಕಾಂಗ್ರೆಸ್ನ ಎರಡೂ ಸದನಗಳಿಂದ, ಪ್ರತಿನಿಧಿಗಳ ಸಭೆ ಹಾಗೂ ಸೆನೆಟ್ಗಳಲ್ಲಿ ಅಂಗೀಕಾರವಾಗಿ ಅಧ್ಯಕ್ಷರ ಸಹಿಯಾಗಬೇಕಾಗುತ್ತದೆ.

ಈ ಸಂಬಂಧ ಹೇಳಿಕೆ ನೀಡಿರುವ ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಡೆಬಿ ವಸೀರ್ಮ್ಯಾನ್ ಶಲ್ಟ್ಜ್, `ಅಮೆರಿಕದ ಮಹಿಳೆಯರ ಮೇಲೆ ತಮ್ಮ ತೀವ್ರಗಾಮಿ ವಿಚಾರಧಾರೆಯನ್ನು ಹೇರಲು ರಿಪಬ್ಲಿಕನ್ ಪಕ್ಷ ಮತ್ತೆ ಪ್ರಯತ್ನಿಸುತ್ತಿದೆ. ಕಳೆದ ದಶಕದಲ್ಲೇ ಕಾಂಗ್ರೆಸ್ ಅಂಗೀಕರಿಸಿದ ಮಹಿಳೆಯರಿಗೆ ಸಂಬಂಧಿಸಿದ ಈ ತೀವ್ರಗಾಮಿ ಮಸೂದೆಯನ್ನು ಈಗ ರಿಪಬ್ಲಿಕನ್ನರು ಅಂಗೀಕರಿಸಿದ್ದಾರೆ' ಎಂದು ಟೀಕಿಸಿದರು.

ಮಸೂದೆಯಲ್ಲಿರುವ ಅಂಶಗಳ ಕುರಿತು ಪ್ರತಿನಿಧಿಗಳ ಸಭೆಯ ಡೆಮಾಕ್ರಟಿಕ್ ಪಕ್ಷದ ವಿಪ್ ಸ್ಟೆನಿ ಎಚ್. ಹೊಯರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ಮಸೂದೆ `ಅಸಂವಿಧಾನಿಕ' ಎನಿಸಿದ್ದು ಸೆನೆಟ್ ಇದಕ್ಕೆ ಒಪ್ಪಿಗೆ ಸೂಚಿಸಲಾರದು ಎಂದಿದ್ದಾರೆ.

ಗರ್ಭಧಾರಣೆಯ ಸಾಕಷ್ಟು ಅವಧಿಯ ನಂತರ ನಡೆಯುವ ಗರ್ಭಪಾತದಿಂದ ಮಹಿಳೆಯರ ಜೀವಕ್ಕೆ ಒದಗಬಹುದಾದ ಅಪಾಯವನ್ನು ತಡೆಗಟ್ಟಲು ಇಂತಹ ಮಸೂದೆ ಅನುಕೂಲ ಎಂದು ಸಭಾನಾಯಕ ಎರಿಕ್ ಕ್ಯಾಂಟರ್ ಅಭಿಪ್ರಾಯಪಟ್ಟರು.

ತಾಯಿ ಆರೋಗ್ಯ ಹಾಗೂ ಆಕೆಯ ಮುಗ್ಧ ಮಗುವಿನ ರಕ್ಷಣೆ ವಿಷಯದಲ್ಲಿ ರಿಪಬ್ಲಿಕನ್ನರು ಹಾಗೂ ಡೆಮಾಕ್ರಟಿಕ್ ಪಕ್ಷದವರು ಸಂಘಟಿತವಾಗಿ ಈ ಮಸೂದೆಯನ್ನು ಬೆಂಬಲಿಸಬೇಕಾಗಿದೆ ಕ್ಯಾಂಟರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.