ಖಾನ್ ಯೂನಿಸ್: ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದ ಮೇಲೆ ಸತತ 2ನೇ ದಿನವೂ ವೈಮಾನಿಕ ದಾಳಿ ನಡೆದಿದ್ದು 54 ಮಂದಿ ಮೃತಪಟ್ಟಿದ್ದಾರೆ.

ವರದಿಗಳ ಪ್ರಕಾರ, ಬುಧವಾರ ರಾತ್ರಿ 10 ಬಾರಿ ದಾಳಿ ನಡೆದಿದ್ದು, ನಾಸ್ಸರ್ ಆಸ್ಪತ್ರೆಯ ಶವಾಗಾರಕ್ಕೆ ಸಾಲು ಸಾಲು ಮೃತದೇಹಗಳನ್ನು ಸಾಗಿಸಲಾಗಿದೆ. ಹಲವು ದೇಹಗಳನ್ನು ಛಿದ್ರಗೊಂಡ ಸ್ಥಿತಿಯಲ್ಲೇ ತರಲಾಯಿತು ಎಂದು ಶವಾಗಾರದ ಅಧಿಕಾರಿಗಳು ದೃಢಪಡಿಸಿದ್ದಾರೆ.

ಮೃತರ ಪೈಕಿ ಕತಾರ್ನ ಮಾಧ್ಯಮವೊಂದರ ಪತ್ರಕರ್ತ ಹಾಗೂ ಆತನ ಕುಟುಂಬದ 11 ಮಂದಿ ಸದಸ್ಯರೂ ಇದ್ದಾರೆ. ಕತಾರ್ನ ಮಾಧ್ಯಮ ಸಂಸ್ಥೆ ಅಲ್–ಅರಬ್ ಟಿವಿ ಈ ಮಾಹಿತಿಯನ್ನು ದೃಢಪಡಿಸಿದೆ. ಆದರೆ, ದಾಳಿ ಕುರಿತಂತೆ ಇಸ್ರೇಲ್ ಮಿಲಿಟರಿ ಪಡೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.