ವಾಷಿಂಗ್ಟನ್ : ಪಾಕಿಸ್ತಾನಕ್ಕೆ ₹7,300ಕೋಟಿ ಮೊತ್ತದ ಭದ್ರತಾ ನೆರವನ್ನು ಸ್ಥಗಿತಗೊಳಿಸಿರುವುದಾಗಿ ಅಮೆರಿಕ ಶುಕ್ರವಾರ ಪ್ರಕಟಿಸಿದೆ.

‘ಅಫ್ಗಾನ್ ತಾಲಿಬಾನ್’, ‘ಹಕ್ಕಾನಿ ನೆಟ್‌ವರ್ಕ್’ನಂತಹ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದ್ದು, ಅವುಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅಮೆರಿಕ ಆರೋಪಿಸಿದೆ.

‘ಪಾಕಿಸ್ತಾನವು ಉಗ್ರರಿಗೆ ಸ್ವರ್ಗವಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸವರ್ಷದಂದು ಟ್ವೀಟ್ ಮಾಡಿರುವ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಇಷ್ಟು ಮಾತ್ರವಲ್ಲದೆ ’ಒಕ್ಕೂಟದ ಬೆಂಬಲ ನಿಧಿ’ಯ ಅಡಿ ಪಾಕಿಸ್ತಾನಕ್ಕೆ 2017ರಲ್ಲಿ ನೀಡಿರುವ ₹ 5,700 ಕೋಟಿ (900 ಮಿಲಿಯನ್ ಡಾಲರ್) ಹಣವನ್ನೂ ಅಮೆರಿಕದ ರಕ್ಷಣಾ ಇಲಾಖೆ ಅಮಾನತುಗೊಳಿಸಿದೆ.

ಇದರಿಂದ ಪಾಕಿಸ್ತಾನಕ್ಕೆ ಸಿಗಬೇಕಿದ್ದ ಆರ್ಥಿಕ ನೆರವು ದೊರೆಯದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.