ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜೆರ್ಸಿಯಲ್ಲಿ 61 ವರ್ಷದ ಭಾರತೀಯ ಸಾವು

16 ವರ್ಷದ ಯುವಕನಿಂದ ಗುಂಡಿನ ದಾಳಿ
Last Updated 18 ನವೆಂಬರ್ 2018, 18:17 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಮೆರಿಕದಲ್ಲಿ ಭಾರತೀಯರ ಹತ್ಯೆ ಮುಂದುವರಿದಿದೆ. ನ್ಯೂಜೆರ್ಸಿಯಲ್ಲಿ16 ವರ್ಷದ ಯುವಕನೊಬ್ಬ ನಡೆಸಿದ ಗುಂಡಿನ ದಾಳಿಗೆ ತೆಲಂಗಾಣದ ಮೇದಕ್‌ ಮೂಲದ 61 ವರ್ಷದ ಸುನಿಲ್‌ ಎದ್ಲಾ ಎಂಬುವರು ಮೃತಪಟ್ಟಿದ್ದಾರೆ.

ಸುನಿಲ್ ಅವರು ಗುರುವಾರ ರಾತ್ರಿ ಕೆಲಸಕ್ಕೆ ತೆರಳಲು ಇಲ್ಲಿನ ವೆಂಟ್‌ನೊರ್‌ ಸಿಟಿ ಅಪಾರ್ಟ್‌ಮೆಂಟ್‌ನಮನೆಯಿಂದ ಹೊರಬಂದ ವೇಳೆ ಈ ದಾಳಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ಶವಪರೀಕ್ಷೆ ಪ್ರಕಾರ, ಗುಂಡಿನ ದಾಳಿಯಿಂದಲೇ ಸತ್ತಿರುವುದು ಗೊತ್ತಾಗಿದೆ ಎಂದು ವೆಂಟ್‌ನೊರ್‌ ಪೊಲೀಸರು ತಿಳಿಸಿದ್ದಾರೆ.

ನವೆಂಬರ್‌ 16ರ ಬೆಳಿಗ್ಗೆ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ, ದರೋಡೆ, ಅಕ್ರಮವಾಗಿ ಬಂದೂಕು ಹೊಂದಿದ ಆರೋಪ ಹೊರಿಸಲಾಗಿದೆ. ಆರೋಪಿಯನ್ನು ಹರ್ಬೊರ್‌ಫೀಲ್ಡ್ಸ್‌ ಬಾಲನ್ಯಾಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

’ನನಗೆ ಈಗ ಏನು ಮಾತನಾಡಬೇಕು ಎಂದೇ ತಿಳಿಯುತ್ತಿಲ್ಲ. ಕೆಲವೇ ನಿಮಿಷಗಳ ಹಿಂದಷ್ಟೇ ಕಾರು ಕೊಂಡೊಯ್ದಿದ್ದರು, ಆಗಲೇ ಈ ರೀತಿಯ ಘಟನೆ ನಡೆದಿದೆ’ ಎಂದು ಸುನಿಲ್ ಅವರ ಮಗ ಮಾರಿಸನ್‌ ಎದ್ಲಾ ತಿಳಿಸಿದ್ದಾರೆ.

ಕಳೆದ ಮೂವತ್ತು ವರ್ಷಗಳಿಂದ ಅಟ್ಲಾಂಟಿಕ್‌ ಸಿಟಿಯಲ್ಲಿ ವಾಸ್ತವ್ಯ ಹೊಂದಿದ್ದ ಸುನಿಲ್‌ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಆತಿಥ್ಯ ಸೇವೆ ನೀಡುವ ಉದ್ಯಮದಲ್ಲಿ ರಾತ್ರಿ ಪಾಳಿಯ ಆಡಿಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಭಾರತಕ್ಕೆ ಬರಬೇಕಿತ್ತು!
ಸಮುದಾಯದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಗುರುತಿಸಿಕೊಳ್ಳುತ್ತಿದ್ದ ಸುನಿಲ್, ತಾಯಿಯ 95ನೇ ಹುಟ್ಟುಹಬ್ಬಕ್ಕಾಗಿ ಕ್ರಿಸ್‌ಮಸ್‌ ವೇಳೆ ಎರಡು ತಿಂಗಳ ಕಾಲ ಭಾರತಕ್ಕೆ ಬರಲಿದ್ದರು. ಅದಕ್ಕೂ ಮುನ್ನವೇ ಈ ರೀತಿಯ ಘಟನೆ ನಡೆದಿರುವುದು ಸ್ನೇಹಿತರು, ಸಂಬಂಧಿಕರಲ್ಲಿ ಆಘಾತ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT