ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಶ್ವೇತಭವನಕ್ಕೆ ಮರಳುತ್ತಿದ್ದಂತೆ ಸುಮಾರು 7,25,000 ಭಾರತೀಯರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ದಾಖಲೆ ರಹಿತ ವಲಸಿಗರ ಭವಿಷ್ಯ ಅತಂತ್ರವಾಗಿದೆ.

ಅಕ್ರಮ ವಲಸೆ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಭರವಸೆ ನೀಡಿದ್ದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ಉದ್ಘಾಟನಾ ಭಾಷಣದಲ್ಲಿಯೂ ಟ್ರಂಪ್ ಇದನ್ನು ಪುನರುಚ್ಛರಿಸಿದ್ದಾರೆ.

‘ಅಕ್ರಮ ವಲಸೆಯನ್ನು ನಿಲ್ಲಿಸುವುದು ನಮ್ಮ ಮೊದಲ ಜವಾಬ್ದಾರಿಯಾಗಿದೆ. ಇದಕ್ಕಾಗಿ ನಾವು ಆಕ್ರಮಿಸುವುದಿಲ್ಲ, ಅತಿಕ್ರಮಿಸುವುದಿಲ್ಲ, ವಶಪಡಿಸಿಕೊಳ್ಳುವುದೂ ಇಲ್ಲ. ನಾವು ಮತ್ತೊಮ್ಮೆ ಸ್ವತಂತ್ರ ಮತ್ತು ಹೆಮ್ಮೆಯ ರಾಷ್ಟ್ರವನ್ನು ಕಟ್ಟುತ್ತೇವೆ. ಇದು ಪ್ರಮಾಣವಚನ ಸ್ವೀಕರಿಸಿದ ಮರುದಿನದಿಂದಲೇ ಪ್ರಾರಂಭವಾಗುತ್ತದೆ’ ಎಂದು ಶಪಥ ಮಾಡಿದ್ದಾರೆ.

‘ನಮ್ಮ ಗಡಿಗಳನ್ನು ಪುನಃಸ್ಥಾಪಿಸಲು ಇದು ಸೂಕ್ತ ಸಮಯವಾಗಿದೆ’ ಎಂದಿದ್ದಾರೆ.

ಮೆಕ್ಸಿಕೋ(40 ಲಕ್ಷ) ಮತ್ತು ಎಲ್ ಸಾಲ್ವಡಾರ್(7.50 ಲಕ್ಷ) ನಂತರ ಅಮೆರಿಕದಲ್ಲಿ ದಾಖಲೆಗಳಿಲ್ಲದೇ ವಾಸಿಸುತ್ತಿರುವ ಮೂರನೇ ಅತಿದೊಡ್ಡ ಸಮೂಹ ಭಾರತೀಯರದ್ದು(7.25 ಲಕ್ಷ) ಎಂದು ವರದಿಯೊಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.