ಸೋಲ್: ‘ದಕ್ಷಿಣ ಕೊರಿಯಾದ ರಾಜಧಾನಿ ಸೋಲ್‌ನಲ್ಲಿ ಗುರುವಾರ ಮಧ್ಯರಸ್ತೆಯಲ್ಲಿ ದಿಢೀರ್ ಕುಸಿತ ಉಂಟಾಗಿದ್ದರಿಂದ ಕಾರು ಸಿಲುಕಿ, ಇಬ್ಬರು ಗಾಯಗೊಂಡಿದ್ದಾರೆ’ ಎಂದು ಇಲ್ಲಿನ ತುರ್ತು ಕಾರ್ಯಾಚರಣಾ ತಂಡ ತಿಳಿಸಿದೆ.
‘ಸೋಲ್‌ನ ದಕ್ಷಿಣ ಭಾಗದಲ್ಲಿ ಎರಡೂವರೆ ಅಡಿ ಆಳದ ಗುಂಡಿ ಸೃಷ್ಟಿಯಾಗಿ, ಬೆಳಿಗ್ಗೆ 11.20ಕ್ಕೆ ಕಾರು ಸಿಲುಕಿಕೊಂಡಿತು. ಕಾರಿನ ಒಳಭಾಗದಲ್ಲಿದ್ದ 82 ವರ್ಷದ ಪುರುಷ ಚಾಲಕ, 76 ವರ್ಷದ ಮಹಿಳಾ ಪ್ರಯಾಣಿಕರೊಬ್ಬರನ್ನು ತಕ್ಷಣವೇ ರಕ್ಷಿಸಲಾಯಿತು’ ಎಂದು ಜಿಲ್ಲಾ ಆಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಸಂಚಾರ ನಿಯಂತ್ರಿಸಿ, ರಾತ್ರಿ ವೇಳೆಗೆ ರಸ್ತೆ ರಿಪೇರಿಪಡಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
2019ರಿಂದ 2023ರ ಅವಧಿಯಲ್ಲಿ ದೇಶದಲ್ಲಿ 879 ರಸ್ತೆ ಕುಸಿದ ಪ್ರಕರಣಗಳು ವರದಿಯಾಗಿವೆ ಎಂದು ದಕ್ಷಿಣ ಕೊರಿಯಾದ ರಸ್ತೆ, ಮೂಲಸೌಕರ್ಯ, ಸಂಚಾರ ವಿಭಾಗವು ತಿಳಿಸಿದೆ. ಒಳಚರಂಡಿ ಪೈಪ್ ಒಡೆದಿದ್ದರಿಂದ ಈ ಪೈಕಿ ಅರ್ಧದಷ್ಟು ರಸ್ತೆ ಕುಸಿದಿದ್ದವು ಎಂದು ಸ್ಪಷ್ಟಪಡಿಸಿದೆ.