ಕಾಬೂಲ್: ಅಫ್ಗಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಗೌರವಿಸಲಿದ್ದೇವೆ. ಆದರೆ, ಇದು ಇಸ್ಲಾಮಿಕ್ ನಿಯಮಗಳ ಅಡಿಯಲ್ಲಿರಲಿದೆ. ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗುವುದಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.

ಅಫ್ಗಾನಿಸ್ತಾನ ವಶಪಡಿಸಿಕೊಂಡ ಬಳಿಕ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಜಾಹಿದ್, 1990ರ ದಶಕದಲ್ಲಿ ದೇಶದಲ್ಲಿ ಕ್ರೂರ ಆಡಳಿತ ನೀಡಿದ್ದ ತಾಲಿಬಾನ್ ಈಗ ಬದಲಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಡಲು ಯತ್ನಿಸಿರುವುದು ಕಂಡುಬಂದಿದೆ.

ಓದಿ:ಮಹಿಳೆಯರೂ ಸರ್ಕಾರದಲ್ಲಿ ಭಾಗಿಯಾಗಬೇಕು: ತಾಲಿಬಾನ್

‘ತಾಲಿಬಾನ್ ಮಹಿಳೆಯರ ಹಕ್ಕುಗಳನ್ನು ಗೌರವಿಸಲಿದೆ. ಆದರೆ ಅದು ಇಸ್ಲಾಮಿಕ್ ನಿಯಮಗಳಿಗೆ ಅನುಗುಣವಾಗಿರಲಿದೆ. ಖಾಸಗಿ ಮಾಧ್ಯಮಗಳು ಸ್ವತಂತ್ರವಾಗಿ ಇರಬೇಕೆಂಬುದು ತಾಲಿಬಾನ್ ಇಚ್ಛೆಯಾಗಿದೆ. ಆದರೆ ಪತ್ರಕರ್ತರು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಬಾರದು. ಅಫ್ಗಾನಿಸ್ತಾನವನ್ನು ಸುಭದ್ರಗೊಳಿಸಲಿದ್ದೇವೆ. ಹಿಂದಿನ ಸರ್ಕಾರದ ಜತೆ ಕೆಲಸ ಮಾಡಿದವರ ಮತ್ತು ವಿದೇಶಿ ಸರ್ಕಾರಗಳು ಅಥವಾ ಪಡೆಗಳ ಜತೆ ಕೆಲಸ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುವುದಿಲ್ಲ’ ಎಂದೂ ಮುಜಾಹಿದ್ ಹೇಳಿದ್ದಾರೆ.

ಆದರೆ, ಅಫ್ಗಾನಿಸ್ತಾನದ ಅನೇಕರಲ್ಲಿ ಇನ್ನೂ ಆತಂಕ ಮನೆ ಮಾಡಿದೆ. ಹಿಂದಿನ ತಲೆಮಾರಿನ ಜನರು ತಾಲಿಬಾನ್‌ನ ಕ್ರೂರ ಆಡಳಿತ ಅನುಭವಿಸಿರುವುದು ಈ ಭೀತಿಗೆ ಕಾರಣ ಎನ್ನಲಾಗಿದೆ.

ಓದಿ:ಕೇರಳದ 41 ಮಂದಿ ಕಾಬೂಲ್ನಲ್ಲಿ ಅತಂತ್ರ

ಅಫ್ಗಾನಿಸ್ತಾನದ ಎಲ್ಲರಿಗೂ ತಾಲಿಬಾನ್ ಕ್ಷಮಾದಾನ ಘೋಷಿಸಿದ್ದು, ಮಹಿಳೆಯರೂ ತನ್ನ ಸರ್ಕಾರದಲ್ಲಿ ಭಾಗಿಯಾಗಬೇಕು ಎಂದು ತಾಲಿಬಾನ್ ಅಧಿಕಾರಿಯೊಬ್ಬರು ಒತ್ತಾಯಿಸಿರುವುದಾಗಿ ಈಗಾಗಲೇ ವರದಿಯಾಗಿದೆ. ಅಫ್ಗಾನಿಸ್ತಾನದ ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿನಿಯಲ್ಲಿ ಇಸ್ಲಾಮಿಕ್ ಎಮಿರೇಟ್‌ನ ಸಾಂಸ್ಕೃತಿಕ ಆಯೋಗದ ಸದಸ್ಯ ಎನಾಮುಲ್ಲಾ ಸಮಂಗಾನಿ ಈ ಹೇಳಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.