ವಾಷಿಂಗ್ಟನ್: ಕೊರೊನಾವೈರಸ್ ಪಿಡುಗು ಜಗತ್ತನ್ನು ಆವರಿಸಿಕೊಂಡು 6 ತಿಂಗಳುಗಳು ಕಳೆದಿದ್ದು ಇದು ಇನ್ನೂ ಮುಗಿಯುವ ಹಂತದಲ್ಲಿ ಇಲ್ಲ. ಇದಕ್ಕಿಂತ ಕೆಟ್ಟದ್ದು ಮುಂದೆ ಬರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ.

ಕೊರೊನಾವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆ 5 ಲಕ್ಷ ದಾಟಿದ್ದು ಸೋಂಕಿತರ ಸಂಖ್ಯೆ ಕೋಟಿಯಷ್ಟಿದೆ. ಹೀಗಿರುವಾಗ ಜನರ ಜೀವ ಕಾಪಾಡಲು ಬದ್ಧವಾಗಿರಬೇಕು. 6 ತಿಂಗಳ ಹಿಂದೆ ನಮ್ಮ ಜಗತ್ತು, ನಮ್ಮ ಬದುಕು ಹೊಸ ವೈರಸ್‌ನಿಂದ ಸಂಕಷ್ಟಕ್ಕೀಡಾಗುತ್ತದೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟ್ರೆಡೋಸ್ ಅದಾನೊಮ್ ಗೆಬ್ರಿಯಾಸ್ ಹೇಳಿದ್ದಾರೆ.ಇದೆಲ್ಲ ಮುಕ್ತಾಯವಾಗಲಿಎಂದು ನಾವು ಬಯಸುತ್ತೇವೆ. ನಾವು ನಮ್ಮ ಸಹಜ ಬದುಕಿಗೆ ಮರಳಬೇಕಿದೆ.ಆದರೆ ವಾಸ್ತವ ಸ್ಥಿತಿಗೆ ಮರಳಲು ಇನ್ನೂ ದೂರವಿದೆ. ಕೆಲವೊಂದು ರಾಷ್ಟ್ರಗಳು ಪ್ರಗತಿ ಸಾಧಿಸಿದ್ದರೂಜಾಗತಿಕ ಮಟ್ಟದಲ್ಲಿ ಈ ಸೋಂಕು ವೇಗವಾಗಿ ಹಬ್ಬುತ್ತಿದೆ.

ನಾವೆಲ್ಲರೂ ಜತೆಗಿದ್ದೀವೆ, ಮುಂದಿನ ದಾರಿಯಲ್ಲಿಯೂ ನಾವು ಜತೆಗಿರುತ್ತವೆ. ಮುಂಬರುವ ತಿಂಗಳುಗಳಲ್ಲಿ ನಮ್ಮಲ್ಲಿ ರೋಗ ಪ್ರತಿರೋಧ ಶಕ್ತಿ, ತಾಳ್ಮೆ, ಮಾನವೀಯತೆ ಮತ್ತು ಔದಾರ್ಯ ಹೆಚ್ಚೇ ಬೇಕು. ನಾವು ಈಗಾಗಲೇ ಬಹಳಷ್ಟು ಕಳೆದುಕೊಂಡಿದ್ದೇವೆ. ಆದರೆ ನಿರೀಕ್ಷೆ ಕಳೆದುಕೊಂಡಿಲ್ಲ.

ಈ ಪಿಡುಗು ಮಾನವೀಯತೆಯ ಒಳ್ಳೆ ಮುಖ ಮತ್ತು ಕೆಟ್ಟ ಮುಖವನ್ನು ತೋರಿಸಿದೆ. ದಯೆಮತ್ತು ಏಕತೆಯ, ತಪ್ಪಾದ ಮಾಹಿತಿ ಮತ್ತು ವೈರಸ್ ಅನ್ನುರಾಜಕೀಯದಲ್ಲಿ ಬಳಸಿದ್ದೂ ನೋಡಿದ್ದೇವೆ.

ಜಾಗತಿಕ ರಾಜಕಾರಣ ಭಿನ್ನತೆ ಮತ್ತು ರಾಷ್ಟ್ರಮಟ್ಟದಲ್ಲಿನ ಭಿನ್ನತೆಗಳೇ ಇರಲಿ ಇದಕ್ಕಿಂತ ಕೆಟ್ಟದ್ದು ಮುಂದೆ ಬರಲಿದೆ. ಈ ರೀತಿ ಹೇಳಿದ್ದಕ್ಕೆ ಕ್ಷಮೆ ಇರಲಿ. ಈ ವಾತಾವರಣ ಮತ್ತು ಪರಿಸ್ಥಿತಿ ನೋಡಿದರೆ ಇನ್ನೂ ಕೆಟ್ಟದ್ದಾಗುವ ಭಯ ಇದೆ ಎಂದು ಟ್ರೆಡೋಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.