ಮಮುಜು (ಇಂಡೊನೇಷ್ಯಾ): ಇತ್ತೀಚೆಗೆ ಇಂಡೋನೇಷ್ಯಾದ ಸುಲೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸತ್ತವರ ಸಂಖ್ಯೆ 81ಕ್ಕೆ ಏರಿದ್ದು, ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ಭೂಕಂಪದಿಂದಾಗಿ ಮಮುಜು ಮತ್ತು ಮಜೆನೆ ನಗರಗಳಲ್ಲಿ ಕಟ್ಟಡಗಳು ಕುಸಿದುಬಿದ್ದಿವೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರಿಗಾಗಿ ವಿಪತ್ತು ನಿರ್ವಹಣಾ ತಂಡಗಳು ಸೋಮವಾರ ಪರಿಹಾರ ಕಾರ್ಯವನ್ನು ತೀವ್ರಗೊಳಿಸಿವೆ.

ಭೂಕಂಪದಿಂದ ತೀವ್ರ ಹಾನಿಗೊಳಗಾಗಿರುವ ಸುಲವೇಸಿ ದ್ವೀಪದ ಈ ಎರಡು ಪ್ರಮುಖ ನಗರಗಳಲ್ಲಿ ಪರಿಹಾರ ಕಾರ್ಯ ತೀವ್ರಗೊಂಡಿದೆ. ಈ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು ಮತ್ತು ವಿಪತ್ತು ಕಾರ್ಯಾಚರಣೆ ಪಡೆಯವರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಸುಲವೇಸಿ ದ್ವೀಪದ ಮಮುಜು ನಗರ ಮತ್ತು ಮಜೆನೆ ಜಿಲ್ಲೆಯ ಕೆಲವುಭಾಗಗಳಲ್ಲಿ ಶುಕ್ರವಾರ ಮುಂಜಾನೆ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 6.2ಷ್ಟು ಭೂಕಂಪದ ತೀವ್ರತೆ ದಾಖಲಾಗಿತ್ತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ರಾದಿತ್ಯಾ ಜತಿ ತಿಳಿಸಿದ್ದಾರೆ.

ಮಮುಜು ಜನಗರದಲ್ಲಿ 70 ಹಾಗೂ ಮಜೆನೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. 27850 ಮಂದಿ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇದರಲ್ಲಿ ಅರ್ಧದಷ್ಟು ಜನ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಎರಡು ನಗರಗಳಲ್ಲಿ ನಿರಾಶ್ರಿತರಿಗೆ ಸ್ವಯಂ ಸೇವಕರು ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.