ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟರ ಗಾಳಿ: ಕಮಲಾ ಹ್ಯಾರಿಸ್‌ ಇದ್ದ ವಿಮಾನ ಮಾರ್ಗ ಬದಲಾವಣೆ

Published 10 ಜನವರಿ 2024, 14:15 IST
Last Updated 10 ಜನವರಿ 2024, 14:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‌ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಜಾರ್ಜಿಯಾ ಪ್ರವಾಸದಿಂದ ವಾಪಸಾಗುತ್ತಿದ್ದಾಗ ಮಂಗಳವಾರ ರಾತ್ರಿ ಹಠಾತ್‌ ಎದುರಾದ ಸುಂಟರ ಗಾಳಿಯಿಂದಾಗಿ ಅವರಿದ್ದ ಏರ್‌ ಫೋರ್ಸ್‌ –2 ವಿಮಾನವನ್ನು ವಾಷಿಂಗ್ಟನ್‌ ಪ್ರದೇಶದ ವಿಮಾನ ನಿಲ್ದಾಣದ ಕಡೆಗೆ ಮಾರ್ಗ ಬದಲಿಸಿದ ಘಟನೆ ನಡೆದಿದೆ. 

ರಾತ್ರಿ ಪ್ರತಿಕೂಲ ಹವಾಮಾನದಿಂದಾಗಿ ಏರ್‌ಫೋರ್ಸ್‌ –2 ವಿಮಾನದ ಮಾರ್ಗವನ್ನು ಅಟ್ಲಾಂಟಾದ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಿಂದ ಡಲ್ಲಾಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬದಲಾಯಿಸಲಾಯಿತು ಎಂದು ಪತ್ರಿಕಾ ಕಾರ್ಯದರ್ಶಿ ಕರ್ಸ್ಟನ್ ಅಲೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರಿ ಬಿರುಗಾಳಿ ಮತ್ತು ಮಳೆಯಿಂದಾಗಿ ವಿಮಾನದ ದಿಕ್ಕನ್ನು ಬದಲಿಸಬೇಕಾಯಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೆಸರು ಬಯಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT