ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶದಿಂದ ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ 205 ಮಂದಿ ಭಾರತಕ್ಕೆ

Published 7 ಆಗಸ್ಟ್ 2024, 4:27 IST
Last Updated 7 ಆಗಸ್ಟ್ 2024, 4:27 IST
ಅಕ್ಷರ ಗಾತ್ರ

ನವದೆಹಲಿ: 6 ಶಿಶುಗಳು ಸೇರಿ 205 ಮಂದಿ ಇದ್ದ ಏರ್‌ ಇಂಡಿಯಾದ ವಿಶೇಷ ವಿಮಾನವು ಢಾಕಾದಿಂದ ದೆಹಲಿಗೆ ಬುಧವಾರ ಮುಂಜಾನೆ ಬಂದಿಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುರುವಾರ ತಡರಾತ್ರಿ ಢಾಕಾದಿಂದ ಈ ಚಾರ್ಟರ್ಡ್ ವಿಮಾನವು ಟೇಕಾಫ್ ಆಗಿದೆ. 199 ವಯಸ್ಕರು ಹಾಗೂ 6 ಶಿಶುಗಳು ಇದ್ದರು. ಈ ವಿಮಾನವು ದೆಹಲಿಯಿಂದ ಬಾಂಗ್ಲಾದೇಶಕ್ಕೆ ಖಾಲಿ ಪ್ರಯಾಣಿಸಿತ್ತು ಎಂದು ಅವರು ತಿಳಿಸಿದ್ದಾರೆ.

ಏರ್‌ ಇಂಡಿಯಾದ ಎರಡು ವಿಮಾನಗಳು ದಿನನಿತ್ಯ ದೆಹಲಿಯಿಂದ ಢಾಕಾಗೆ ಕಾರ್ಯಾಚರಣೆ ನಡೆಸುತ್ತಿದೆ. ಮಂಗಳವಾರ ಬೆಳಿಗ್ಗಿನ ವಿಮಾನ ರದ್ದಾಯಿತಾದರೂ, ಸಂಜೆಯ ವಿಮಾನ ಕಾರ್ಯಾಚರಣೆ ನಡೆಸಿದೆ.

ವಿಸ್ತಾರ ಹಾಗೂ ಇಂಡಿಗೊದ ವಿಮಾನಗಳು ಎಂದಿನಂತೆ ಢಾಕಾಗೆ ಸೇವೆಯನ್ನು ನೀಡುತ್ತಿದೆ. ವಿಸ್ತಾರ‌ ಏರ್‌ಲೈನ್ಸ್‌ನ ವಿಮಾನವು ಮುಂಬೈನಿಂದ ಢಾಕಾಗೆ ನಿತ್ಯ ಸೇವೆ ನೀಡುತ್ತಿದೆ. ದೆಹಲಿಯಿಂದ ವಾರಕ್ಕೆ ಮೂರು ಬಾರಿ ಕಾರ್ಯಾಚರಣೆ ನಡೆಸುತ್ತಿವೆ.

ಇಂಡಿಗೊ ಕಂಪನಿಯ ದೆಹಲಿ, ಮುಂಬೈ ಹಾಗೂ ಚೆನ್ನೈನಿಂದ ಢಾಕಾಗೆ ಪ್ರತಿದಿನ ಒಂದು ಹಾಗೂ ಕೋಲ್ಕತ್ತದಿಂದ ದಿನಂಪ್ರತಿ 2 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಮಂಗಳವಾರ ಈ ಎರಡೂ ಕಂಪನಿಯ ವಿಮಾನಗಳು ರದ್ದಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT