ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟಿಷ್ ಅಕಾಡೆಮಿ ಬುಕ್‌ ಪ್ರಶಸ್ತಿ: ಅಂತಿಮ ಸ್ಪರ್ಧೆಗೆ ಭಾರತೀಯ ಲೇಖಕ ಅಮಿತಾವ್

Published : 10 ಸೆಪ್ಟೆಂಬರ್ 2024, 14:01 IST
Last Updated : 10 ಸೆಪ್ಟೆಂಬರ್ 2024, 14:01 IST
ಫಾಲೋ ಮಾಡಿ
Comments

ಲಂಡನ್: 2024ನೇ ಸಾಲಿನ ಬ್ರಿಟಿಷ್ ಅಕಾಡೆಮಿ ಬುಕ್‌ ಪ್ರಶಸ್ತಿಗಾಗಿ ಅಂತಿಮಗೊಳಿಸಲಾದ ಲೇಖಕರ ಪಟ್ಟಿಯಲ್ಲಿ ಭಾರತೀಯ ಲೇಖಕ ಅಮಿತಾವ್ ಘೋಷ್‌ ಸ್ಥಾನ ಪಡೆದಿದ್ದಾರೆ.

ಸೃಜನೇತರ ಕೃತಿಗಳಿಗಾಗಿ ನೀಡುವ ಈ ಅಂತರರಾಷ್ಟ್ರೀಯ ಪ್ರಶಸ್ತಿಯು ಒಟ್ಟು ₹27.44 ಲಕ್ಷ (ಜಿಬಿಪಿ 25 ಸಾವಿರ) ಮೊತ್ತವನ್ನು ಒಳಗೊಂಡಿದೆ. ಕೋಲ್ಕತ್ತ ಮೂಲದ ಲೇಖಕ ಘೋಷ್‌ ಸದ್ಯ ಅಮೆರಿಕದಲ್ಲಿ ನೆಲಸಿದ್ದಾರೆ. 

ಅಮಿತಾವ್ ಘೋಷ್ ಅವರ, ‘ಸ್ಮೋಕ್‌ ಅಂಡ್ ಆ್ಯಷಸ್: ಒಪಿಯಮ್ಸ್‌ ಹಿಡನ್‌ ಹಿಸ್ಟರೀಸ್’ ಕೃತಿಯು ಪ್ರಶಸ್ತಿಗಾಗಿ ಅಂತಿಮಗೊಂಡಿರುವ ಆರು ಕೃತಿಗಳಲ್ಲಿ ಸೇರಿದೆ. ಇಂಗ್ಲಿಷ್‌ ಭಾಷೆಯಲ್ಲಿಯೂ ಲಭ್ಯವಿರುವ, ಜಗತ್ತಿನ ಯಾವುದೇ ಭಾಷೆಯ ಕೃತಿಗಳು ಪ್ರಶಸ್ತಿಗೆ ಅರ್ಹವಾಗಿದ್ದು, ಸ್ಪರ್ಧೆಯು ಮುಕ್ತವಾಗಿದೆ.

‘ಸ್ಮೋಕ್‌ ಅಂಡ್ ಆ್ಯಷಸ್...’ ಸರಾಗವಾಗಿ ಓದಿಸಿಕೊಳ್ಳುವ ಪ್ರವಾಸಕಥನವಾಗಿದೆ. ಕಥನ ಹೇಳುವ ಲೇಖಕರ ಕೌಶಲ ಗಮನಸೆಳೆಯಲಿದೆ’ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ತೀರ್ಪುಗಾರರು ಬಣ್ಣಿಸಿದ್ದಾರೆ.  

‘18ನೇ ಶತಮಾನದದಿಂದ ಇಲ್ಲಿಯವರೆಗೆ ಅಫೀಮಿನ ಜಾಗತಿಕ ವಹಿವಾಟನ್ನು ಬಿಚ್ಚಿಡುವ, ಆರ್ಥಿಕತೆ ಮತ್ತು ಸಂಸ್ಕೃತಿಯ ಮೇಲೆ ಅದರ ಪರಿಣಾಮವನ್ನು ನಿರೂಪಿಸುವ ಸಮಗ್ರ ಅಧ್ಯಯನ ಆಧರಿತ ಕೃತಿ ಇದಾಗಿದೆ’ ಎಂದು ಬ್ರಿಟಿಷ್‌ ಅಕಾಡೆಮಿ ಬುಕ್‌ ಪ್ರೈಸ್‌ನ ಹೇಳಿಕೆಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT