ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಹೈಕಮಿಷನ್‌ ಮೇಲಿನ ದಾಳಿ ಸಹಿಸಲ್ಲ: ಬ್ರಿಟನ್‌

Published 6 ಜುಲೈ 2023, 13:52 IST
Last Updated 6 ಜುಲೈ 2023, 13:52 IST
ಅಕ್ಷರ ಗಾತ್ರ

ಲಂಡನ್‌: ‘ಲಂಡನ್‌ನಲ್ಲಿನ ಭಾರತದ ಹೈಕಮಿಷನ್‌ ಮೇಲೆ ಮಾಡಲಾಗುವ ಯಾವುದೇ ನೇರ ದಾಳಿಯನ್ನು ಸಹಿಸಲಾಗುವುದಿಲ್ಲ’ ಎಂದು ಬ್ರಿಟನ್‌ ಸರ್ಕಾರ ಗುರುವಾರ ಹೇಳಿದೆ. ಭಾರತವನ್ನು ಗುರಿಯಾಗಿಸಿಕೊಂಡು ಖಾಲಿಸ್ತಾನಿ ಉಗ್ರರು ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸುತ್ತಿರುವ ನಡುವೆಯೇ ಬ್ರಿಟನ್‌ ಈ ಹೇಳಿಕೆ ನೀಡಿದೆ.

‘ಭಾರತದ ರಾಯಭಾರ ಕಚೇರಿ ಸಿಬ್ಬಂದಿಯ ಸುರಕ್ಷತೆಯು ನಮ್ಮ ಆದ್ಯತೆ ಎಂದು ಬ್ರಿಟನ್‌ನಲ್ಲಿನ ಭಾರತದ ರಾಯಭಾರಿ ವಿಕ್ರಮ್‌ ದೊರೆಸ್ವಾಮಿ ಮತ್ತು ಭಾರತ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದೇವೆ’ ಎಂದು ಅಲ್ಲಿಯ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಜೇಮ್ಸ್‌ ಕ್ಲೆವರ್ಲಿ ಟ್ವೀಟ್‌ ಮಾಡಿದ್ದಾರೆ.‌

ಅಮೆರಿಕ, ಆಸ್ಟ್ರೇಲಿಯ, ಕೆನಡಾ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಖಾಲಿಸ್ತಾನಿ ಬೆಂಬಲಿಗರು ಈಚೆಗೆ ಹೇಳಿಕೆ ನೀಡಿದ್ದರು. ಜೊತೆಗೆ, ವಿಕ್ರಮ್‌ ದೊರೆಸ್ವಾಮಿ ಹಾಗೂ ಬರ್ಮಿಂಗ್‌ಹ್ಯಾಮ್‌ನಲ್ಲಿನ ಭಾರತದ ಕಾನ್ಸುಲ್‌ ಜನರಲ್‌ ಡಾ. ಶಶಾಂಕ್‌ ವಿಕ್ರಮ್‌ ಅವರ ಚಿತ್ರಗಳನ್ನು ಟ್ವೀಟ್‌ ಮಾಡಿದ್ದರು.  

ಇಲ್ಲಿಯ ಭಾರತೀಯ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ಮಾರ್ಚ್‌ನಲ್ಲಿ ದಾಳಿ ಮಾಡಿದ್ದ ಖಾಲಿಸ್ತಾನಿ ಬೆಂಬಲಿಗರು ಕಚೇರಿ ಎದುರಿನ ಭಾರತದ ಧ್ವಜವನ್ನು ಹರಿದು ಹಾಕಿದ್ದರು ಮತ್ತು ಕಿಟಕಿಗಳ ಗಾಜುಗಳನ್ನು ಒಡೆದಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT