ಹೂಸ್ಟನ್(ಟೆಕ್ಸಾಸ್): ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಾರ್ಚ್ 19ರೊಳಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಡಲಿದ್ದಾರೆ ಎಂದು ನಾಸಾ ತಿಳಿಸಿದೆ.

ಟ್ರಾನ್ಸ್ಪೋರ್ಟರ್ -13 ಮಿಷನ್ ಉಡಾವಣೆಗೆ ಮಾರ್ಚ್ 14ರಂದು ಸಂಜೆ 7:03 ಕ್ಕೆ ನಾಸಾದ ಸ್ಪೇಸ್ಎಕ್ಸ್ ಕ್ರೂ -10 ಗುರಿ ಹೊಂದಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಈ ಮಿಷನ್ ನಾಲ್ಕು ಸಿಬ್ಬಂದಿಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಿದೆ. ರಾಕೆಟ್ ಸಂಚರಿಸುವ ಹಾದಿಯಲ್ಲಿ ಹೆಚ್ಚಿನ ಗಾಳಿ ಮತ್ತು ಮಳೆಯ ಮುನ್ಸೂಚನೆಯ ಕಾರಣ ಗುರುವಾರ ಉಡಾವಣಾ ಪ್ರಯತ್ನವನ್ನು ರದ್ದುಗೊಳಿಸಲು ಮಿಷನ್ ವ್ಯವಸ್ಥಾಪಕರು ಮೊದಲೇ ನಿರ್ಧರಿಸಿದ್ದರು. ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39Aನಲ್ಲಿ ಫಾಲ್ಕನ್ 9 ರಾಕೆಟ್ನ ಹೈಡ್ರಾಲಿಕ್ ಸಿಸ್ಟಮ್ ಸಮಸ್ಯೆಯನ್ನು ಪರಿಹರಿಸಲು ಉಡಾವಣಾ ತಂಡಗಳು ಕೆಲಸ ಮಾಡುತ್ತಿವೆ ಎಂದೂ ತಿಳಿಸಿದೆ.

ಮಾರ್ಚ್ 14ರಂದು ಕ್ರೂ-10 ಉಡಾವಣೆಯೊಂದಿಗೆ, ನಾಸಾ ಗಗನಯಾನಿಗಳು ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿದ ಬಳಿಕ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಯತ್ತ ತೆರಳಲಿದ್ದಾರೆ. ಮಾರ್ಚ್ 19ಕ್ಕೆ ಅವರು ಹೊರಡುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ.

ಬಾಹ್ಯಾಕಾಶಕ್ಕೆ ತೆರಳುವ ಯೋಜನೆಯೊಂದಿಗೆ, ನಾಸಾ ಗಗನಯಾನಿಗಳಾದ ಆನ್ ಮೆಕ್ಕ್ಲೇನ್ ಮತ್ತು ನಿಕೋಲ್ ಅಯರ್ಸ್, ಜಾಕ್ಸಾದ(ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಶನ್ ಏಜೆನ್ಸಿ) ಗಗನಯಾನಿ ಟಕುಯಾ ಒನಿಶಿ ಮತ್ತು ರೋಸ್ಕೋಸ್ಮೋಸ್ ಗಗನಯಾನಿ ಕಿರಿಲ್ ಪೆಸ್ಕೋವ್ ಅವರು ಫ್ಲೋರಿಡಾದ ನಾಸಾ ಕೆನಡಿಯಲ್ಲಿರುವ ಗಗನಯಾನಿಗಳ ಕ್ವಾರ್ಟರ್ಸ್ನಲ್ಲೇ ಉಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.