ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇನ್ಯಾದಲ್ಲಿ ಭೀಕರ ಅಪಘಾತ: 51 ಜನರ ಸಾವು

Published 1 ಜುಲೈ 2023, 16:13 IST
Last Updated 1 ಜುಲೈ 2023, 16:13 IST
ಅಕ್ಷರ ಗಾತ್ರ

ನೈರೋಬಿ: ಪಶ್ಚಿಮ ಕೇನ್ಯಾದಲ್ಲಿ ಶಿಪ್ಪಿಂಗ್ ಕಂಟೇನರ್‌ ಅನ್ನು ಹೊತ್ತೊಯ್ಯುತ್ತಿದ್ದ ಟ್ರಕ್‌ವೊಂದು ಇತರ ವಾಹನಗಳು ಮತ್ತು ಮಾರುಕಟ್ಟೆ ವ್ಯಾಪಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 51 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇನ್ಯಾದ ರಾಜಧಾನಿ ನೈರೋಬಿಯಿಂದ 200 ಕಿ.ಮೀ ದೂರವಿರುವ ಲೊಂಡಿಯಾನಿ ಪಟ್ಟಣದಲ್ಲಿ ಈ ಅಪಘಾತ ಶುಕ್ರವಾರ ಸಂಜೆ ಸಂಭವಿಸಿದೆ. ಪಾದಚಾರಿಗಳ ಮೇಲೂ ಟ್ರಕ್‌ ಹರಿದ ಪರಿಣಾಮ ಸಾವು ನೋವುಗಳು ಹೆಚ್ಚಾಗಿವೆ.

ಸದ್ಯಕ್ಕೆ 51 ಮೃತದೇಹಗಳನ್ನು ಪತ್ತೆಯಾಗಿವೆ. ಅವಶೇಷಗಳ ಅಡಿ ಇನ್ನಷ್ಟು ಜನರು ಸಿಲುಕಿರಬಹುದು ಎಂದು ‘ರಿಫ್ಟ್‌ ವ್ಯಾಲಿ’ ಠಾಣೆಯ ಪೊಲೀಸ್‌ ಕಮಾಂಡರ್‌ ಟಾಮ್‌ ಒಡೆರಾ ತಿಳಿಸಿದ್ದಾರೆ.

ಈ ಅಪಘಾತದಲ್ಲಿ ಗಾಯಗೊಂಡಿರುವ 32 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು  ಕೇನ್ಯಾ ರೆಡ್‌ ಕ್ರಾಸ್‌ ಸೊಸೈಟಿ ತಿಳಿಸಿದೆ.

ಅಪಘಾತದಲ್ಲಿ ಧ್ವಂಸಗೊಂಡ ವಾಹನಗಳಲ್ಲಿ ಹಲವರು ಸಿಲುಕಿಕೊಂಡಿದ್ದಾರೆ. ಆದರೆ ಭಾರಿ ಮಳೆಯ ಕಾರಣ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ ಎಂದು ರೆಡ್‌ಕ್ರಾಸ್‌ ಸೊಸೈಟಿ ಹೇಳಿದೆ.

‘ಟ್ರಕ್‌ ಮೊದಲು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆಯಿತು. ಬಳಿಕ ವ್ಯಾಪಾರಿಗಳಿಗೂ ಡಿಕ್ಕಿ ಹೊಡೆದು, ಪಾದಚಾರಿಗಳ ಮೇಲೂ ಹರಿಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT