ಪೆಶಾವರ: ವಾಯವ್ಯ ಪಾಕಿಸ್ತಾನದ ಮದರಸಾವೊಂದರ ಮೇಲೆ ಮಂಗಳವಾರ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. 70 ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪೆಶಾವರದ ಮದರಸಾದಲ್ಲಿ ಕುರಾನ್ ಬೋಧನೆಯ ವೇಳೆ ಈ ದಾಳಿ ನಡೆದಿದೆ. ತರಗತಿಯಲ್ಲಿ 60 ಕ್ಕೂ ಹೆಚ್ಚು ಮಕ್ಕಳಿದ್ದರು ಎಂದು ಪೊಲೀಸ್ ಅಧಿಕಾರಿ ವಘಾರ್ ಅಸೀಮ್ ಅವರು ತಿಳಿಸಿದರು.

ಬಾಂಬ್ ಸ್ಫೋಟಕ್ಕೂ ಮೊದಲು ವ್ಯಕ್ತಿಯೊಬ್ಬ ಚೀಲವೊಂದನ್ನು ಹೊತ್ತುಕೊಂಡುಕುರಾನ್ ತರಗತಿ ನಡೆತ್ತಿದ್ದ, ಮದರಸಾದ ಸಭಾಂಗಣಕ್ಕೆ ಬಂದಿದ್ದಾನೆ. ವಾಪಸ್ ಹೋಗುವಾಗ ಆ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ‘ ಎಂದು ವಘಾರ್ ತಿಳಿಸಿಸಿದರು. ‘ಈವರೆಗೂ ದಾಳಿಯ ಹೊಣೆಯನ್ನು ಯಾವ ಸಂಘಟನೆಯು ಹೊತ್ತಿಲ್ಲ’ ಎಂದು ಅವರು ಹೇಳಿದರು.

ಸ್ಫೋಟ ಸಂಭವಿಸಿದ ಸ್ಥಳದಲ್ಲಿಲ ಏಳು ಮೃತ ದೇಹಗಳು ಪತ್ತೆಯಾಗಿವೆ. 70 ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತಪಟ್ಟವರೆಲ್ಲರೂ 20 ರಿಂದ 40 ವರ್ಷದೊಳಗಿನ ಪುರುಷರು ಎಂದು ಸ್ಥಳೀಯ ಆಸ್ಪತ್ರೆಯ ವಕ್ತಾರ ಮೊಹಮ್ಮದ್ ವಸೀಮ್ ಖಾನ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.