ಮೆಕ್ಸಿಕೊ ನಗರ: ದಕ್ಷಿಣ ಮೆಕ್ಸಿಕೊದ ಗೆರೆರೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೇಯರ್, ಅವರ ತಂದೆ ಸೇರಿದಂತೆ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ.

ಸ್ಯಾನ್ ಮಿಗ್ಯುಲ್ ಟೊಟೊಲಾಪನ್ ನಗರದಲ್ಲಿ ಬುಧವಾರ ಹಗಲಲ್ಲೇ ಈ ದಾಳಿ ನಡೆದಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಎರಡು ಎಸ್ಯುವಿ ಕಾರುಗಳಲ್ಲಿ ಮುಸುಕುಧಾರಿ ದಾರಿಕೋರರು ಗುಂಡಿನ ದಾಳಿ ನಡೆಸಿದ್ದಾರೆ.

ಮೇಯರ್ ಕೊನ್ರಾಡೊ ಮೆಂಡೊಜಾ ಮತ್ತು ಅವರ ತಂದೆ, ಮಾಜಿ ಮೇಯರ್ ಸೇರಿದಂತೆ 18 ಮಂದಿಯನ್ನು ದಾಳಿಕೋರರು ಹತ್ಯೆ ಮಾಡಿದ್ದಾರೆ. ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಟಾರ್ನಿ ಜೆನರಲ್ ಸಂದ್ರಾ ಲೂಜ್ ವಾಲ್ಡೊವಿನಸ್ ಹೇಳಿದ್ದಾರೆ.

ಹಗಲಲ್ಲೇ ನಗರದಲ್ಲಿ ನಡೆದ ಗುಂಡಿನ ದಾಳಿಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಘಟನೆಯ ಬಳಿಕೆ ನೆರೆಯ ರಾಜ್ಯ ಮೊರೆಲೊಸ್ನಲ್ಲಿ ರಾಜಕಾರಣಿಯೊಬ್ಬರ ಹತ್ಯೆ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.