ಇಸ್ಲಾಮಾಬಾದ್/ಕರಾಚಿ: ಕಳೆದ 40 ತಾಸಿನಲ್ಲಿ ಬಲೂಚಿಸ್ತಾನದಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಕನಿಷ್ಠ 145 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಬಲೂಚಿಸ್ತಾನ ಪ್ರಾಂತ್ಯದ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಹೇಳಿದ್ದಾರೆ.

ಘಟನೆಯಲ್ಲಿ 17 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
.Republic of Balochistan | ಪಾಕ್ ಪತನ ಶೀಘ್ರ, ಬಲೂಚಿಸ್ತಾನ ಉದಯ: ಮೀರ್ ಯಾರ್.ಬಲೂಚಿಸ್ತಾನ ರೈಲು ಅಪಹರಣ ಪ್ರಕರಣ: ಕಾಬೂಲ್ ಮುಂದೆ ಪ್ರತಿಭಟನೆ ದಾಖಲು.
ಕ್ವೆಟ್ಟಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು 145 ಭಯೋತ್ಪಾದಕರ ಮೃತದೇಹಗಳು ಅಧಿಕಾರಿಗಳ ವಶದಲ್ಲಿದ್ದು, ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದ್ದಾರೆ.

ಬಲೂಚ್ ಗುಂಪಿಗೆ ಸೇರಿದ ಉಗ್ರರು ದಾಳಿ ನಡೆಸಿದ ಬಳಿಕ ಕ್ವೆಟ್ಟಾ, ಸಿಬಿ, ಗ್ವಾದರ್, ನೋಶ್ಕಿ, ಪಾಸ್ನಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಯೋತ್ಪಾದಕರ ವಿರುದ್ಧ ಪಾಕ್ನ ಭದ್ರತಾ ಪಡೆ ಕಾರ್ಯಾಚರಣೆಯನ್ನು ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದಕ ಚಟುವಟಕೆಗಳನ್ನು ನಡೆಸುವ ಮೂಲಕ ಉಗ್ರರು ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಸೇನೆ ತಿಳಿಸಿದೆ.

ಪಾಕಿಸ್ತಾನದ 200ಕ್ಕೂ ಹೆಚ್ಚು ಮಂದಿಯ ಹತ್ಯೆ...

ಏತನ್ಮಧ್ಯೆ ಪಾಕಿಸ್ತಾನದ ಭದ್ರತಾ ಪಡೆ, ಸೇನೆ, ಪೊಲೀಸ್ ಹಾಗೂ ಫ್ರಾಂಟಿಯರ್ ಕಾರ್ಪ್ಸ್ ಸೇರಿದಂತೆ 200ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಲಾಗಿದ್ದು, 17 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಲೂಚಿಸ್ತಾನ ವಿಮೋಚನಾ ಸೇನೆ (ಬಿಎಲ್ಎ) ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.