ವಾಷಿಂಗ್ಟನ್: ಬರಾಕ್ ಒಬಾಮ ‘ಸಂಪೂರ್ಣ ಅಸಮರ್ಥ ಅಧ್ಯಕ್ಷ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದರು.

ಡೊನಾಲ್ಡ್ ಟ್ರಂಪ್ ಅವರು ಕೋವಿಡ್–19ರ ನಿರ್ವಹಣೆಯಲ್ಲಿ ಗೋಜಲು ಮಾಡಿಕೊಂಡಿದ್ದಾರೆ, ಕನಿಷ್ಠ ಪಕ್ಷ ಸರಿಯಾಗಿ ನಿರ್ವಹಿಸುವ ನಾಟಕವನ್ನೂ ಮಾಡುತ್ತಿಲ್ಲ ಎಂದು ಮಾಜಿ ಅಧ್ಯಕ್ಷ ಬರಾಕ್ ಈಚೆಗಷ್ಟೇ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಇದೀಗ ಟ್ರಂಪ್ ಅವರು ಒಬಾಮಮೇಲೆ ಹರಿಹಾಯ್ದಿದ್ದಾರೆ.

‘ಅವರೊಬ್ಬ ಅಸಮರ್ಥ ಅಧ್ಯಕ್ಷರಾಗಿದ್ದರು.ಸಂಪೂರ್ಣ ಅಸಮರ್ಥ ಅಧ್ಯಕ್ಷ, ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ’ಎಂದು ಡೊನಾಲ್ಡ್ ಟ್ರಂಪ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಅಮೆರಿಕದ ವಿವಿಧೆಡೆಯಿರುವ 74 ಐತಿಹಾಸಿಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಹಳೆಯ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಒಬಾಮ, ‘ಆಡಳಿತ ಚುಕ್ಕಾಣಿ ಹಿಡಿದವರು ಸರಿಯಾಗಿ ನಿರ್ವಹಿಸುತ್ತಿಲ್ಲ’ಎಂದು ಟೀಕಿಸಿದ್ದರು. ಆದರೆ ಟ್ರಂಪ್ ಅವರ ಹೆಸರು ಪ್ರಸ್ತಾಪಿಸಿರಲಿಲ್ಲ.

‘ನಮ್ಮ ಆಡಳಿತ ಚುಕ್ಕಾಣಿ ಹಿಡಿದವರು ಹಾಕಿಕೊಂಡಿದ್ದ ಪರದೆಯನ್ನು ಈ ಪಿಡುಗು ಹರಿದುಹಾಕಿದೆ. ಪರದೆಯ ಹಿಂದಿರುವ ಅನೇಕರು ಕನಿಷ್ಠ ಪಕ್ಷ ಕಾರ್ಯನಿರ್ವಹಿಸುತ್ತಿರುವುದಾಗಿ ತೋರಿಸಿಕೊಳ್ಳುತ್ತಲೂ ಇಲ್ಲ’ಎಂದು ಒಬಾಮಹೇಳಿದ್ದರು.

ಕೋವಿಡ್–19ರಿಂದ ಅಮೆರಿಕ ಪರಿಸ್ಥಿತಿ ಬಿಗಡಾಯಿಸಿದೆ. ಈವರೆಗೆ 14.84 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ಸುಮಾರು 89 ಸಾವಿರ ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.