ನವದೆಹಲಿ: ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಕೋವಿಡ್-19 ಲಸಿಕೆಯು ಉತ್ಪಾದನಾ ಮಾನದಂಡಗಳನ್ನು ಪೂರೈಸುತ್ತಿಲ್ಲ ಎಂದು ಬ್ರೆಜಿಲ್‌ನ ಆರೋಗ್ಯ ನಿಯಂತ್ರಕಅನ್ವಿಸಾ ತಿಳಿಸಿದೆ.

ಮಂಗಳವಾರ ಬಿಡುಗಡೆ ಮಾಡಿದ ಅಧಿಕೃತ ಗೆಜೆಟ್‌ನ ಆವೃತ್ತಿಯಲ್ಲಿ ಈ ಕುರಿತು ಟಿಪ್ಪಣಿ ಮಾಡಿದೆ.

ಕಳೆದ ತಿಂಗಳು ಭಾರತೀಯ ಔಷಧಿ ತಯಾರಕರಿಂದ ಕೋವಿಡ್ ಲಸಿಕೆಯ ಎರಡು ಕೋಟಿ ಡೋಸ್‌ಗಳನ್ನು ಖರೀದಿಸಲು ಬ್ರೆಜಿಲ್ ಸರ್ಕಾರ ಸಹಿ ಹಾಕಿತ್ತು.

ಇದನ್ನೂ ಓದಿ:ಏಪ್ರಿಲ್ 19ರೊಳಗೆ ಶೇ 90ರಷ್ಟು ವಯಸ್ಕರಿಗೆ ಕೋವಿಡ್ ಲಸಿಕೆ: ಜೋ ಬೈಡನ್

ಭಾರತ್ ಬಯೋಟೆಕ್ ಮಾರ್ಚ್ 8ರಂದು ಬ್ರೆಜಿಲ್‌ನಲ್ಲಿ ಲಸಿಕೆ ತುರ್ತು ಬಳಕೆಗಾಗಿ ಅರ್ಜಿ ಸಲ್ಲಿಸಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ್ ಮತ್ತು ಅದರ ಬ್ರೆಜಿಲ್ ಪಾಲುದಾರ ಪ್ರೆಸಿಕಾ ಮೆಡಿಕಾಮೆಂಟೋಸ್, ಈ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದ್ದು, ಎಲ್ಲ ಮಾನದಂಡಗಳನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ಪುರಾವೆಗಳನ್ನು ಪ್ರಸ್ತುತಪಡಿಸಲಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ ಸೇರಿದಂತೆ ಐದು ದೇಶಗಳಲ್ಲಿ ಕೋವ್ಯಾಕ್ಸಿನ್ ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.