ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಹಲವು ರಾಜ್ಯಗಳ ಸರ್ಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ

Published 5 ಜನವರಿ 2024, 2:55 IST
Last Updated 5 ಜನವರಿ 2024, 2:55 IST
ಅಕ್ಷರ ಗಾತ್ರ

ಜಾಕ್ಸನ್‌: ಅಮೆರಿಕದ ಹಲವು ರಾಜ್ಯಗಳ ಸರ್ಕಾರಿ ಕಚೇರಿಗಳಿಗೆ ಗುರುವಾರ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕಚೇರಿಗಳನ್ನು ಖಾಲಿ ಮಾಡಲಾಗಿದೆ. ಬುಧವಾರವೂ ಹೀಗೆ ಬಾಂಬ್‌ ಬೆದರಿಕೆ ಕರೆ ಬಂದಿತ್ತು.

ಮಿಸಿಸಿಪ್ಪಿ ಕ್ಯಾಪಿಟಲ್‌ ಭವನ (ರಾಜ್ಯದ ಶಾಸನ ಸಭೆಯ ಕಟ್ಟಡ) ಹಾಗೂ ಅರ್ಕಾನ್ಸಾಸ್, ಹವಾಯ್‌, ಮೈನೆ, ಮೊಂಟನಾ ಹಾಗೂ ನ್ಯೂ ಹೆಮಿಸ್ಪಿಯರ್‌ನ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್‌ ಬೆದರಿಕೆ ಬಂದಿದೆ. ಈ ಪೈಕಿ ಕೆಲವು ಕಚೇರಿಗಳಲ್ಲಿ ಶೋಧ ನಡೆಸಲಾಗಿದ್ದು, ಇನ್ನು ಕೆಲವು ಕಚೇರಿಗಳನ್ನು ಖಾಲಿ ಮಾಡಲಾಗಿದೆ. ಆದರೆ ತಕ್ಷಣಕ್ಕೆ ಯಾವುದೇ ಸ್ಫೋಟಕಗಳು ಪತ್ತೆಯಾಗದ ಕಾರಣ ಕಚೇರಿಗಳನ್ನು ಸಾರ್ವಜನಿಕ ಪ್ರವೇಶಕ್ಕೆ ಮತ್ತೆ ತೆರೆಯಲಾಗಿದೆ.

ಬುಧವಾರ ಹಲವು ರಾಜ್ಯಗಳ ಕ್ಯಾಪಿಟಲ್ ಭವನಗಳಿಗೆ ಹುಸಿ ಬಾಂಬ್ ಬೆದರಿಕೆ ಇ–ಮೇಲ್ ಬಂದಿತ್ತು. ಹೀಗಾಗಿ ಕಚೇರಿಗಳನ್ನು ಬಂದ್‌ ಮಾಡಲಾಗಿತ್ತು. ಇದಾದ ಮರುದಿನವೇ ಮತ್ತೆ ಬಾಂಬ್ ಬೆದರಿಕೆ ಬಂದಿದೆ.

ಜಾಕ್ಸನ್‌ ಹಾಗೂ ಮಿಸಿಸಿಪ್ಪಿಯಲ್ಲಿ ಕ್ಯಾಪಿಟಲ್ ಭವನದ ರಸ್ತೆಯಲ್ಲಿರುವ ರಾಜ್ಯ ಸುಪ್ರೀಂ ಕೋರ್ಟ್‌ ಸಂಕೀರ್ಣಕ್ಕೆ ಬಾಂಬ್‌ ಬೆದರಿಕೆ ಬಂದಿದೆ. ಈ ಪ್ರದೇಶದಲ್ಲಿದ್ದ ಜನರನ್ನು ಬೇರೆಡೆ ಸ್ಥಳಾಂತರಿಸುವ ಮುನ್ನ ಸ್ಥಳವನ್ನು ಬಾಂಬ್ ಪತ್ತೆ ಶ್ವಾನ ದಳ ಪರಿಶೀಲನೆ ನಡೆಸಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಅಫ್‌ ಇನ್‌ವೆಸ್ಟಿಗೇಷನ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT